

ಹುಕ್ಕೇರಿ: ವಿದ್ಯುತ್ ಸಹಕಾರಿ ಸಂಘದ ವಿದ್ಯುತ್ ಪರಿಕರಗಳನ್ನು ಸಂಗ್ರಹಿಸಲು ಬೃಹತ್ ಗೋದಾಮು ನಿರ್ಮಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಹೇಳಿದರು.
ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆವರಣದಲ್ಲಿ ಈಚೆಗೆ ಗೋದಾಮು ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 1.15 ಕೋಟಿ ರೂ. ವೆಚ್ಚದ ಗೋದಾಮಿನಲ್ಲಿ ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಲೈನ್ ರಚನಾ ಕಾಮಗಾರಿಯ ಸರಕು ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸಲು ಅನುಕೂಲವಾಗಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಸಂಘದ ಎಂಡಿ ಶ್ರೀನಿವಾಸ ಕೆ.ಎಲ್., ನಿರ್ದೇಶಕರಾದ ಅಶೋಕ ಚಂದಪ್ಪಗೋಳ, ಶಶಿರಾಜ ಪಾಟೀಲ, ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮ, ಬಸಗೌಡ ಮಗೆಣ್ಣವರ, ರವೀಂದ್ರ ಹಿಡಕಲ್, ಜಯಗೌಡ ಪಾಟೀಲ, ಸೋಮಲಿಂಗ ಪಾಟೀಲ, ಸಂಗೀತಾ ದಪ್ಪಾದೂಳಿ, ಶಿವಲೀಲಾ ಮಣಗುತ್ತಿ, ರೆಸಿಡೆಂಟ್ ಇಂಜನಿಯರ್ ನೇಮಿನಾಥ ಖೇಮಲಾಪುರೆ, ಮ್ಯಾನೇಜರ್ ದುರದುಂಡಿ ನಾಯಿಕ, ನಿವತ್ತ ಇಂಜಿನಿಯರ್ ಎ.ಬಿ.ಪಟ್ಟಣಶೆಟ್ಟಿ, ಆನಂದ ದಪ್ಪಾದೂಳಿ, ಜಿನಗೌಡ ಇಮಗೌಡನವರ, ಪುಂಡಲೀಕ ನಂದಗಾಂವಿ ಇತರರಿದ್ದರು.