

ಬಂಕಾಪುರ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 40 ಸಾವಿರ ರೂ. ಮೌಲ್ಯದ ಎತ್ತನ್ನು ಬುಲೇರೋ ವಾಹನದಲ್ಲಿ ಬಂದ ಯಾರೋ ಖದೀಮರು ಕಳ್ಳತನ ಮಾಡಿಕೊಂಡು ಹೋದ ಘಟನೆ ಇಲ್ಲಿಗೆ ಸಮೀಪದ ಕಲ್ಯಾಣ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಮಲ್ಲಪ್ಪ ಯಲ್ಲಪ್ಪ ಬೂದಿಹಾಳ (47) ಎಂಬುವರ ಎತ್ತು ಕಳ್ಳತನ ಮಾಡಿರುವುದು.
ಇವರು ತಮ್ಮ ದನದ ಕೊಟ್ಟಿಗೆಯಲ್ಲಿ ಎತ್ತನ್ನು ಕಟ್ಟಿದ್ದರು. ಯಾರೋ ಖದೀಮರು ಬುಲೇರೋ ವಾಹನದಲ್ಲಿ ಬಂದು ಎತ್ತನ್ನು ಹಾಕಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.