

ಹೊಸಪೇಟೆ: ತಾಲೂಕಿನ ಬುಕ್ಕಸಾಗರ ಗ್ರಾಪಂ. ನೂತನ ಅಧ್ಯಕ್ಷರಾಗಿ ವಿ.ಕೆ.ಹನುಮಂತಪ್ಪ ಉಪಾಧ್ಯಕ್ಷೆಯಾಗಿ ರಮಾದೇವಿ ಅವಿರೋಧವಾಗಿ ಆಯ್ಕೆಯಾದರು.
ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಶುಕ್ರವಾರ ಆಯೋಜಿಸಿದ್ದ ಚುನಾವಣೆಯ ಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿ.ಕೆ.ಹನುಮಂತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಮಾದೇವಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವುಗಳನ್ನು ಪರಿಶೀಲಿಸಿ, ನಿಯಮಾನುಸಾ ರ ಅವರು ಆಯ್ಕೆಯಾಗಿದ್ದಾರೆ ಎಂದು ಸಿಡಿಪಿಒ ಬಿ.ಟಿ.ಬೋಗೇಶ್ ಘೋಷಿಸಿದರು.
ಬಳಿಕ ಚುನಾವಣಾಧಿಕಾರಿ ಸಿಡಿಪಿಒ ಬಿ.ಟಿ.ಬೋಗೇಶ್, ಪಿಡಿಒ ಪೂರ್ಣತೇಜ ಕುರಟ್ಟಿ, ಸದಸ್ಯರಾದ ಗಾಯತ್ರಿ, ಗಾಳೆಮ್ಮ, ವೆಂಕಟೇಶ್, ದ್ಯಾವಮ್ಮ ವಡ್ರು, ಎಸ್.ಎಂ.ಜಡೆಯ್ಯಸ್ವಾಮಿ, ರಮೇಶಕುಮಾರ್, ಡಿ.ಜಿ.ಚನ್ನಬಸಮ್ಮ, ಹನುಮಕ್ಕ, ಲಕ್ಷಿö್ಮ ಹರಿಜನ, ಬಿ.ಶಶಿಧರ, ಶೆಕ್ಷಾವಲಿ, ಶೈನಾಜ್‌ಬೇಗಮ್, ರೇವಣ್ಣ, ವಾಣಿ, ಎ.ಶಂಕ್ರಪ್ಪ, ವರಲಕ್ಷಿö್ಮ, ಗೊಂಚಗೇರಿ ತಿಮ್ಮಪ್ಪ, ಜಿ.ಮಲ್ಲೇಶ, ಪ್ರಮುಖರಾದ ಅಮಾಜಿ ಹೇಮಣ್ಣ, ಎ.ಚಂದ್ರಶೇಖರ್, ಕಟ್ಗಿ ಲಿಂಗರಾಜ, ಆರ್.ವೀರಣ್ಣ, ಕೃಷ್ಣ, ಸಿದ್ಧಲಿಂಗಪ್ಪ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ, ಶುಭ ಕೋರಿದರು.
ವಿ.ಕೆ.ಹನುಮಂತಪ್ಪ ಐದು ಬಾರಿ ಗ್ರಾ.ಪಂ. ಸದಸ್ಯರಾಗಿದ್ದು, ಎರಡು ಬಾರಿ ಉಪಾಧ್ಯಕ್ಷರಾಗಿದ್ದರು. ಇದೇ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.