

ಬಾಗಲಕೋಟೆ: ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಮಟ್ಟದ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಬಿಲ್ಡ್ ಟೆಕ್-2025 ಬಾಗಲಕೋಟೆ ನಗರದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಜೂ. 20 ರಿಂದ 22 ರವರೆಗೆ ನಡೆಯಲಿದೆ.
20 ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೀರಣ್ಣ ಚರಂತಿಮಠ ನೆರವೇರಿಸುವರು. ರಾಜ್ಯ ಕೆಎಡಿಬಿ ಮಿನಿಸ್ಟರ್ ಆಫ್ ಲಾರ್ಜ್ ಅಂಡ್ ಮೀಡಿಯಂ ಇಂಡಸ್ಟ್ರಿಯ ಟೆಕ್ನಿಕಲ್ ಅಡ್ವೈಸರ್ ಪ್ರೊ. ಅರವಿಂದ ಗಲಗಲಿ ಮತ್ತು ನಗರಸಭೆ ಆಯುಕ್ತ ವಾಸಣ್ಣ ಆರ್., ಹುಬ್ಬಳ್ಳಿಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷೆ ದೇವಕಿ ಮತ್ತು ನಮ್ಮ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಬಾಗಲಕೋಟೆ ಅಧ್ಯಕ ಆರ್.ಎಂ. ತಪಶೆಟ್ಟಿ, ಸಂಚಾಲಕ ಆನಂದ ಕುಲಕರ್ಣಿ, ಯುಎಸ್ ಕಮ್ಯುನಿಕೇಶನ್ ಪದಾಧಿಕಾರಿಗಳಾದ ಉಮಾಪತಿ ಎಸ್.ಎಂ.ಕೆ. ಹಾಗೂ ಕಲ್ಮೇಶ ತೋಟದ ಉಪಸ್ಥಿತರಿರುವರು.
ಸಾಮಾನ್ಯವಾಗಿ ಮನೆ ಅಥವಾ ಕಟ್ಟಡ ಕಟ್ಟುವ ವೇಳೆ ಉಂಟಾಗುವ ಗೊಂದಲ ಮತ್ತು ಸೂಕ್ತ ಮಾಹಿತಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಾರೆ. ಈ ರೀತಿಯ ಸಮಸ್ಯೆಗಳಿಗೆ ಮುಕ್ತಿ ಕೊಡುವ ನಿಟ್ಟಿನಲ್ಲಿ ನಮ್ಮ ಇಂಜಿನಿಯರ್ಸ್ಗಳ ಒಕ್ಕೂಟ ವಸ್ತು ಪ್ರದರ್ಶನ ಆಯೋಜಿಸಿದ್ದು, ಪ್ರತಿದಿನ ಬೆಳಗ್ಗೆ 10-30 ರಿಂದ ರಾತ್ರಿ 8-30 ರವರೆಗೆ ವಸ್ತು ಪ್ರದರ್ಶನವು ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಂಜಿನಿಯರ್ ಆರ್.ಎಂ. ತಪಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.