12ರಿಂದ ಬಾಗಲಕೋಟೆಯಲ್ಲಿ ಬಿಲ್ಡ್‌ಟೆಕ್-2022 ವಸ್ತು ಪ್ರದರ್ಶನ : ರಾಷ್ಟ್ರ ಮತ್ತು ಅಂತರಾಷ್ಟ್ರೀಯಮಟ್ಟದ ಉತ್ಪಾದಕ ಸಂಸ್ಥೆಗಳು ಭಾಗಿ

Published on

ಬಾಗಲಕೋಟೆ : ಬೆಂಗಳೂರಿನ ಮೆ. ಯು.ಎಸ್. ಕಮ್ಯೂನಿಕೇಷನ್ಸ್ ಸಂಸ್ಥೆಯವರು, ಬಾಗಲಕೋಟೆ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್‌ (ರಿ), ಅವರ ಸಹಯೋಗದೊಂದಿಗೆ ಕಟ್ಟಡ ಸಾಮಗ್ರಿಗಳು ಮತ್ತು ಗೃಹಾಲಂಕಾರ ವಸ್ತುಗಳ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ 40ಕ್ಕೂ ಅಧಿಕ ಉತ್ಪಾದಕರಿಂದ ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಆ. 12, 13 ಹಾಗೂ 14ರಂದು ಬಿಲ್ಡ್ ಟೆಕ್- 2022 ಬೃಹತ್ ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದಾರೆ.

12ರಂದು ಮಧ್ಯಾಹ್ನ 12 ಗಂಟೆಗೆ ಶಾಸಕರು, ಬಿವಿವಿ ಸಂಘದ ಚೇರ್ಮನ್ ಡಾ. ವೀರಣ್ಣ ಚರಂತಿಮಠ ಬಿಲ್ಡ್ ಟೆಕ್-2022 ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸಲಿಂಗಪ್ಪ ನಾಲವಲಗಿ ದೀಪ ಬೆಳಗಿಸುವರು. ಅತಿಥಿಗಳಾಗಿ ವಿಭಾಗೀಯ ಅಧಿಕಾರಿ ಗಣಪತಿ ಪಾಟೀಲ, ವಿಜಯಪುರ ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ. ರವೀಂದ್ರ ಬಿ. ಬೆಳ್ಳಿ, ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂವಹನ ಕೇಂದ್ರದ ಸಂಪಾದಕ ಡಾ. ಎಸ್. ಶಶಿಕುಮಾರ್ ಆಗಮಿಸಲಿದ್ದಾರೆ.

ಬೃಹತ್ ವಸ್ತು ಪ್ರದರ್ಶನದಲ್ಲಿ ಕಟ್ಟಡ ಹಾಗೂ ಗೃಹಾಲಂಕಾರ ಸಾಮಗ್ರಿ, ಸಿಮೆಂಟ್, ಗ್ರಾನೈಟ್, ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಕಿಟಕಿ, ಗ್ಲಾಸ್, ಸೋಲಾರ್, ಪೀಠೋಪಕರಣಗಳು, ಮಾಡ್ಯೂಲರ್ ಕಿಚನ್, ಗೃಹ ನಿರ್ಮಾಣ ಸಾಲ ಮುಂತಾದುವುಗಳು ಮಾಹಿತಿಯು ವಸ್ತು ಪ್ರದರ್ಶನದಲ್ಲಿ ಗ್ರಾಹಕರಿಗೆ ದೊರೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮೂರೂ ದಿನ ಬೆಳಗ್ಗೆ 10-30 ರಿಂದ ರಾತ್ರಿ 8-30ರವರೆಗೆ ವಸ್ತು ಪ್ರದರ್ಶನ ತೆರೆದಿರುತ್ತದೆ ಎಂದು ಬಾಗಲಕೋಟೆ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್‌ ಅಧ್ಯಕ್ಷ ಆರ್.ಎಂ. ತಪಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net