ಕಟ್ಟಡ ಕಾರ್ಮಿಕರ ಸಮಾವೇಶ : ಶೈಕ್ಷಣಿಕ ಸಾಧಕರಿಗೆ ಸನ್ಮಾನ

Published on

ಸುಳ್ಯ: ಭಾರತೀಯ ಮಜ್ದೂರು ಸಂಘ ಸುಳ್ಯ, ಕರ್ಣಾಟಕ ಕಟ್ಟಡ ನಿರ್ಮಾಣ, ಸುಳ್ಯ ತಾಲೂಕು ಕಾಮಗಾರಿ ಮಜ್ದೂರು ಸಂಘ ವತಿಯಿಂದ ವಿಶ್ವಕರ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, ಕಟ್ಟಡ ಕಾರ್ಮಿಕರ ಸಮಾವೇಶ ಹಿರಿಯ ಕಟ್ಟಡ ಕಾರ್ಮಿಕರಿಗೆ ಗೌರವಾರ್ಪಣೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಂಗಳವಾರ ಸುಳ್ಯದಲ್ಲಿ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಹಿರಿಯ ಕಾರ್ಮಿಕರನ್ನು, ಶೈಕ್ಷಣಿಕ ಸಾಧಕರನ್ನು ಗೌರವಿಸಿದರು. ಸಂಘದ ತಾಲೂಕು ಅಧ್ಯಕ್ಷ ನಾರಾಯಣ ಜಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಗಾಂಧಿನಗರದಿಂದ ಕಾರ್ಮಿಕರ ಜಾಥಾ ನಡೆಯಿತು. ನ್ಯಾಯವಾದಿ, ನಪಂ ಸದಸ್ಯ ಎಂ.ವೆಂಕಪ್ಪ ಗೌಡ ಚಾಲನೆ ನೀಡಿದರು.

ಸುಳ್ಯ ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕರ್ನಾಟಕ ಕಟ್ಟಡ ನಿರ್ಮಾಣ, ಕಾಮಗಾರಿ ಮಜ್ದೂರು ಸಂಘದ ಸುಳ್ಯ ಘಟಕ ಗೌರವಾಧ್ಯಕ್ಷ ವೆಂಕಟ್ ವಳಲಂಬೆ, ಬಿ.ಎಂ.ಎಸ್. ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಯು., ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ, ಇಂಜಿನಿಯರ್‌ಗಳಾದ ಶ್ಯಾಮ್ ಪ್ರಸಾದ್, ದೇವಿಪ್ರಸಾದ್, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ., ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸುಳ್ಯದ ಯೋಜನಾಧಿಕಾರಿ ಮಾಧವ ಗೌಡ, ರಿಕ್ಷಾ ಯೂನಿಯನ್ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಇಂಜಿನಿಯರ್ ಆರೀಫ್ ಬೆಳ್ಳಾರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net