ರಸ್ತೆ, ಸೇತುವೆ ಮಾಡುವುದೇ ಅಭಿವೃದ್ಧಿಯಲ್ಲ: ಮಧು ಬಂಗಾರಪ್ಪ

madhu bangarappa adress the media
ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
Published on

ಶಿವಮೊಗ್ಗ: ರಸ್ತೆ, ಸೇತುವೆ ಮಾಡುವುದೇ ಅಭಿವೃದ್ಧಿಯಲ್ಲ. ಜನರ ಆರ್ಥಿಕ ಸ್ಥಿತಿ ಸುಧಾರಿಸಲು ಒತ್ತು ನೀಡಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪಹೇಳಿದರು.

ದೇಶದಲ್ಲಿ ಶ್ರೀಮಂತರ ಬಳಿ ದುಡ್ಡು ಇರಬಾರದು. ಬಡವರ ಬಳಿ ಹಣ ಇರಬೇಕೆಂಬುದು ನಮ್ಮ ಧ್ಯೇಯ. ಬಡವರ ಬಳಿ ಹಣ ಇದ್ದರೆ ಅದು ಚಲಾವಣೆ ಆಗುತ್ತದೆ. ಆ ರೀತಿ ಹಣ ಒಬ್ಬರಿಂದ ಒಬ್ಬರಿಗೆ ಚಲಾವಣೆ ಆದಾಗ ಮಾತ್ರ ದೇಶದ ಆರ್ಥಿಕತೆ ಚಲನಾಶೀಲವಾಗಿರುತ್ತದೆ ಎಂದರು.
ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಕಾರ್ಯಕರ್ತರು, ಮತದಾರರು ಸಹಕಾರ ನೀಡಿದ್ದಾರೆ. ಇದುವರೆಗೆ ಚುನಾವಣೆ ಸಂದರ್ಭಗಳಲ್ಲಿ ನಿರ್ದಿಷ್ಟ ಗುರಿ ಇಲ್ಲದೆ ಕೆಲಸ ಮಾಡಲಾಗುತ್ತಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಿಂದ ಮತದಾರರ ಮನವೊಲಿಸುವುದನ್ನು ಕಲಿತಿದ್ದೇವೆ. ಒಂದೊಂದು ಗ್ರಾಪಂಗೆ ಗ್ಯಾರಂಟಿ ಮೂಲಕ 75 ಲಕ್ಷ ರೂ. ಕೊಡುತ್ತಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net