

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರು ಹತ್ತಾರು ಸಮಸ್ಯೆ, ಸವಾಲುಗಳ ಮಧ್ಯೆ ಕೆಲಸ ಮಾಡುತ್ತಾರೆ. ಈ ದಿಸೆಯಲ್ಲಿ ಗೃಹ ನಿರ್ಮಾಣ ಕಾರ್ಮಿಕರ ಸಂಘವು ಒಟ್ಟಾಗಿ ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಸಂಗತಿ ಎಂದು ಉಪಮೇಯರ್ ದುರಗಮ್ಮ ಬಿಜವಾಡ ಹೇಳಿದರು.
ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗೃಹ ನಿರ್ಮಾಣ ಕಾರ್ಮಿಕರ ಸಂಘದ 50ನೇ ವಾರ್ಷಿಕೋತ್ಸವ ಹಾಗೂ ಕಟ್ಟಡ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಕಟ್ಟಡದ ನಿಜವಾದ ನಿರ್ಮಾಪಕರು ಕಾರ್ಮಿಕರು. ಅವರಿಗೆ ಅನುಕೂಲಗಳನ್ನು ಮಾಡಿಕೊಡ ಬೇಕಾಗಿರುವುದು ಸಮಾಜ, ಸರ್ಕಾರದ ಕರ್ತವ್ಯವಾಗಿದೆ ಎಂದರು.
ಸಮಾಜ ಸೇವಕ ರಮೇಶ ಮಾದೇವಪ್ಪನವರ ಮಾತನಾಡಿ, ನಾವೆಲ್ಲ ಒಳ್ಳೆಯ ಮನೆ ಕಟ್ಟಬೇಕಾದರೆ ಕಾರ್ಮಿಕರು ಬೇಕು. ಎಂತಹದೇ ಸವಾಲಿನ ಕೆಲಸ ಇದ್ದರೂ ಸಲೀಸಾಗಿ ಮಾಡಿ ಮುಗಿಸುತ್ತಾರೆ. ರೈತರು ದೇಶದ ಬೆನ್ನೆಲುಬಾದರೆ, ಕಾರ್ಮಿಕರು ನಿರ್ಮಾಣ ಕ್ಷೇತ್ರದ ಬೆನ್ನೆಲುಬಾಗಿದ್ದಾರೆ. ಅವರಿಂದ ನಿರ್ಮಾಣ ಕ್ಷೇತ್ರವು ಶ್ರೀಮಂತವಾಗಿ ಬೆಳೆಯುತ್ತಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಹೂವಪ್ಪ ದಾಯಗೋಡಿ ಮಾತನಾಡಿ, ಮೊದಲೆಲ್ಲ ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿ ಕಾಲ್ನಡಿಯಲ್ಲಿ ಹೋಗಿ ಕಟ್ಟಡ ಕೆಲಸಗಳನ್ನು ಮಾಡಿ ಬರುತ್ತಿದ್ದೇವು. ಈಗ ಸಾಕಷ್ಟು ಬದಲಾವಣೆ ಆಗಿದೆ. ಆದರೂ, ಕಾಮಿರ್ಕರ ಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆ ಭದ್ರತೆಯ ಜತೆಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾಮಿರ್ಕರ ಒಕ್ಕೂಟದ ವಾಸು ಲಮಾಣಿ ಮಾತನಾಡಿ, 50 ವರ್ಷ ಹಳೆಯ ಕಟ್ಟಡ ಕಾಮಿರ್ಕ ಸಂಘ ಇದೆ ಎಂಬುದು ನಮಗೆಲ್ಲ ಗೊತ್ತೇ ಇರಲಿಲ್ಲ. ಕಾಮಿರ್ಕರ ಅನುಕೂಲಕ್ಕಾಗಿ ನಾವು 12 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಹಳೇ ಸಂವಾದ ಇದು ಕೂಡ ಹೋರಾಟದಲ್ಲಿ ತೊಡಗಿರುವುದರಿಂದ ಕಾಮಿರ್ಕರಿಗೆ ಇನ್ನಷ್ಟು ಬಲ ಬಂದಂತಾಗಿದೆ. ಸಂಟನೆ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಲಿ ಎಂದು ಆಶಿಸಿದರು.
ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಅಧ್ಯಕ್ಷ ಶಿವಾನಂದ ಕೊಣ್ಣೂರ, ಸಂವು 50ನೇ ವರ್ಷಾಚರಣೆ ಮಾಡುತ್ತಿರುವುದು ಸಂಭ್ರಮದ ದಿನ. ಕಾರ್ಮಿಕರಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡಬೇಕು. ಕಟ್ಟಡ ನಿರ್ಮಾಣ ಕ್ಷೇತ್ರದ ಎಲ್ಲ ಕಾರ್ಮಿಕರು ಇದರಲ್ಲಿ ಬರುತ್ತಾರೆ. ಎಲ್ಲರ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಂಘಟನೆಗಳ ಎಂ.ಎ. ದೊಡಮನಿ, ಎಂ.ಎಂ. ಕಾತರಕಿ, ನಿಂಗಪ್ಪ ಬಡಿಗೇರ, ಮಂಜುನಾಥ ಬಡಿಗೇರ, ಮುಸ್ತಾಕ ನದಾಫ್, ದುರ್ಗಾ ಡೆವಲಪರ್ಸ್ನ ಹನಮಂತಪ್ಪ ಮ್ಯಾಗೇರಿ, ಇತರರು ಇದ್ದರು.
ಇದಕ್ಕೂ ಮೊದಲು ಡಾ. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟ ನೂರಾರು ಕಾರ್ಮಿಕರು, ಸಂಘಟನೆಯ ಜಯಘೋಷ ಮೊಳಗಿಸಿದರು. ಗಾಜಿನಮನೆಯಲ್ಲಿ ಕಾರ್ಮಿಕರ ನೇತ್ರ ತಪಾಸಣೆ ಶಿಬಿರ ನಡೆಸಲಾಯಿತು.