ಕಟ್ಟಡ ಕಾರ್ಮಿಕರ ಕೊಡುಗೆ ದೊಡ್ಡದು

18MAMADAPUR1
Published on

ಮಮದಾಪುರ: ಕಟ್ಟಡ ನಿರ್ಮಾಣದಿಂದ ಕಾರ್ಖಾನೆಗಳಲ್ಲಿ ದುಡಿಯುವವರೆಗೂ ಕಾರ್ಮಿಕರು ದೊಡ್ಡ ಕೊಡುಗೆ ನೀಡುತ್ತಾರೆ ಎಂದು ಯುವ ಮುಖಂಡ ಅಮರನಾಥ ಜಾರಕಿಹೊಳಿ ಹೇಳಿದರು. ಸಮೀಪದ ಖನಗಾಂವ ಗ್ರಾಮದಲ್ಲಿ ಈಚೆಗೆ ಖನ್ನಮ್ಮದೇವಿ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಸಂ ಉದ್ಘಾಟಿಸಿ ಮಾತನಾಡಿದರು. ಅಸಂಟಿತ ವರ್ಗಕ್ಕೆ ಸೇರಿರುವ ಕಾರ್ಮಿಕರು ಸರ್ಕಾರ ನೀಡುವ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಆರ್​. ಕಾಗಲ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ, ಗೋಕಾಕ ಕಾರ್ಮಿಕರ ನಿರೀಣಾಧಿಕಾರಿ ಮಾವರ್ಕರ, ಗ್ರಾಮ ಪಂಚಾಯಿತಿ ಅಧ್ಯೆ ನಂದವ್ವ ಮಾಳಗಿ, ಮುಖಂಡರಾದ ಸಿದ್ದಗೌಡ್ರ ಪಾಟೀಲ, ಬಸಪ್ಪ ಹಮ್ಮಿಣಿ, ಸಂತೋಷ ನಾಯಿಕ, ಸಿದ್ದಪ್ಪ ದೇಸಾಯಿ, ಶಿವಾನಂದ ಪಾಟೀಲ, ಎಲ್​.ಜಿ. ಪಾಟೀಲ, ಸಂದ ಸದಸ್ಯರು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net