ಮಕ್ಕಳ ಭವಿಷ್ಯಕ್ಕೆ ಶಿಕ್ಷಕರು, ಪಾಲಕರು ಅವಶ್ಯ

sudakar
ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ಶ್ರೀ ಸಿದ್ಧಗಂಗಾ ಅಂಗ್ಲ ಮಾಧ್ಯಮ ಶಾಲೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಭಾಗಿಯಾಗಿದ್ದರು. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಸಂಸದ ಡಾ.ಸುಧಾಕರ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಮಕ್ಕಳ ಸವಾರ್ಂಗೀಣ ಬೆಳವಣಿಗೆಯಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸಿದಂತೆ ಇದರಲ್ಲಿ ಪಾಲಕರೂ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ಹೋಬಳಿಯ ಬೂದಿಗೆರೆ ಗ್ರಾಮದ ಶ್ರೀ ಸಿದ್ಧಗಂಗಾ ಅಂಗ್ಲ ಮಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಸಾಮಾನ್ಯವಾಗಿ ಪಾಲಕರನ್ನು ಅನುಕರಣೆ ಮಾಡುತ್ತಾರೆ. ಆದ್ದರಿಂದ ಪಾಲಕರು ತಮ್ಮ ಅಭ್ಯಾಸಗಳಲ್ಲಿ ಮಕ್ಕಳಿಗಾಗಿ ಉತ್ತಮ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಸಲಹೆ ನೀಡಿದರು.
ಅಂದಿನ ಕಾಲಕ್ಕೆ ಉಳುವವನೇ ಭೂಮಿಯ ಒಡೆಯ ಆಗಿದ್ದ, ಇಂದಿನ ಕಾಲಕ್ಕೆ ಓದಿದವನೆ ಸರ್ಕಾರಿ ನೌಕರಿ ಒಡೆಯ ಆಗಿದ್ದಾನೆ. ಮಕ್ಕಳಿಗೆ ನುರಿತ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಶಾಲೆಗಳಲ್ಲಿ ಬೋಧಿಸಬೇಕು ಎಂದು ಸಲಹೆ ನೀಡಿದರು.
ಇಬ್ಬರ ಶ್ರಮವೂ ಅಗತ್ಯ: ಓದುವ ಹವ್ಯಾಸವನ್ನು ಮಕ್ಕಳು ಬಾಲ್ಯದಲ್ಲಿ ರೂಡಿಸಿಕೊಳ್ಳದಿದ್ದರೆ, ಹದಿಹರೆಯದರಲ್ಲಿ, ಪ್ರೌಢಾವಸ್ಥೆಯಲ್ಲಿ ಓದುವ ಹವ್ಯಾಸ ಹುಟ್ಟುಹಾಕುವುದು ಬಹಳ ಕಷ್ಟಕರವಾಗುತ್ತದೆ. ಪಾಲಕರು ತಮ್ಮ ಮಗುವನ್ನು ಶಾಲೆಗೆ ಸೇರಿಸಿದರೆ ಸಾಲುವುದಿಲ್ಲ, ಬದಲಾಗಿ ನಿರಂತರವಾಗಿ ತಮ್ಮ ಮಗುವಿನ ಚಟುವಟಿಕೆ, ಕಲಿಕೆ ಅಭಿವೃದ್ಧಿ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ಪಾಲಕರು ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದು ಸ್ವಾಮೀಜಿ ನುಡಿದರು.

ಸಚಿವರ ಭರವಸೆ: ಸಿದ್ಧಗಂಗಾ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ಗೌಡ, ನಮ್ಮ ಶಾಲೆಗೆ ಕ್ರೀಡಾಂಗಣ ಮತ್ತು ಶಾಲೆಯ ಮುಂಭಾಗದಲ್ಲಿ ಕಾಂಕ್ರಿಟ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೂತನ ಸಂಶದರಿಗೆ ಮನವಿ ಪತ್ರ ನೀಡಿದರು. ಕೂಡಲೇ ಪ್ರತಿಕ್ರಿಯಿಸಿದ ಬೆಂಗಳೂರು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಲ್ಕು ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಸಿಎಸ್ ಆರ್ ನಿಧಿಯಿಂದ ವತಿಯಿಂದ 2 ಕೋಟಿ ರೂ ವೆಚ್ಚದ ಶಾಲೆಗೆ ಬೂದಿಗೆರೆ ಶಾಲೆಯನ್ನು ಆಯ್ಕೆ ಮಾಡಲಾಗಿದೆ.ಶಾಲೆಯ ಮುಂದೆ ಕಾಂಕ್ರಿಟ್ ಹಾಕಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net