ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಗುರಿ

MDG mal
ಮೂಡಿಗೆರೆಯಲ್ಲಿ ಮಲೆನಾಡು ಪರಿಶಿಷ್ಟ ಜಾಾತಿ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.
Published on

ಮೂಡಿಗೆರೆ: ನಾನು ಶಾಸಕನಾಗಿದ್ದಾಗ ಮಲೆನಾಡು ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 50 ಲಕ್ಷ ರೂ. ಮಂಜೂರು ಮಾಡಿಸಿಕೊಂಡು ಬಂದಿದ್ದು, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ವರ್ಷ ಹೊಸ ಕಟ್ಟಡದಲ್ಲೇ ಸರ್ವ ಸದಸ್ಯರ ಸಭೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ಯಾರೂ ಹಣ ದುರ್ಬಳಕೆ ಮಾಡಿಕೊಂಡಿಲ್ಲ. ಸಭೆಯ ಖರ್ಚು ಕೂಡ ನಿರ್ದೇಶಕರು ಹಾಗೂ ಸದಸ್ಯರ ಸ್ವಂತ ಖರ್ಚಿನಿಂದ ಮಾಡಲಾಗುತ್ತಿದೆ. ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನ ಸಿಗಲಿಲ್ಲವೆಂಬ ಹತಾಶೆ ಬೇಡ. ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ಮುಂದೆಯೂ ಅವಕಾಶ ಸಿಗಲಿದೆ. ಎಲ್ಲ ಸದಸ್ಯರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಂಘದ ಅಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದರು.
ಸಾಲ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಲೋಕವಳ್ಳಿ ರಮೇಶ್, ಪಿ.ಕೆ.ಮಂಜುನಾಥ್, ಬೆಟ್ಟಗೆರೆ ಶಂಕರ್, ಕಿರುಗುಂದ ರಾಮಯ್ಯ, ಹೊನ್ನೇಶ್ ಒತ್ತಾಯಿಸಿದರು.
ನಿರ್ದೇಶಕರಾದ ಯು.ಬಿ.ಮಂಜಯ್ಯ, ಹೊನ್ನಪ್ಪ, ಎಚ್.ಎಸ್.ಪುಟ್ಟಸ್ವಾಮಿ, ಎಂ.ಸಿ.ಹೂವಪ್ಪ. ಎಚ್.ಆರ್.ಚಂದ್ರು, ಧರ್ಮಯ್ಯ ಮರ್ಲೆ, ಎಚ್.ಎಸ್.ಲಕ್ಷ್ಮಣ್, ಹೆಸಗಲ್ ಗಿರೀಶ್, ಲೋಕೇಶ್, ಬಿ.ಆರ್.ಮಂಜುಳಾ, ಕಾರ್ಯದರ್ಶಿ ಎಂ.ಎಸ್.ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net