

ಕೋಟ: ಸಂಘಟನೆ ಕಟ್ಟುವುದು ಸುಲಭ. ಆದರೆ ಅದನ್ನು ನಿರಂತರ ಕೊಂಡ್ಯೊಯುವುದು ಸವಾಲಿನ ಕಾರ್ಯ ಎಂದು ಜೆಸಿಐ ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಅಕ್ಷತಾ ಗಿರೀಶ್ ಹೇಳಿದರು.
ಭಾನುವಾರ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ, ಮಣೂರು ಸ್ನೇಹಕೂಟ ವಾರ್ಷಿಕೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್, ನಿವೃತ್ತ ಶಿಕ್ಷಕಿ ಸ್ನೇಹಕೂಟ ಸದಸ್ಯೆ ಸುವರ್ಣಲತಾ ಉಪಸ್ಥಿತರಿದ್ದರು. ಸಹ ಸಂಚಾಲಕಿ ವನೀತಾ ಉಪಾಧ್ಯ ಸನ್ಮಾನಿತರನ್ನು ಪರಿಚಯಿಸಿದರು. ಸಂಚಾಲಕಿ ಭಾರತಿ ವಿ.ಮಯ್ಯ ಸ್ವಾಗತಿಸಿದರು. ಸಹಸಂಚಾಲಕಿ ಸುಜಾತ ಬಾಯರಿ, ಸದಸ್ಯೆ ಸ್ಮಿತಾರಾಣಿ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ಹೊಳ್ಳ ವಂದಿಸಿದರು.
ಸ್ನೇಹಕೂಟದ ಸದಸ್ಯರಾದ ಶ್ರೀದೇವಿ ಹಂದೆ, ಶಿವ ಪ್ರಭೆ ಅಲ್ಸೆ, ಅನ್ನಪೂರ್ಣ ಹಂದೆ, ಸಾವಿತ್ರಿ ಮಯ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿವೇತನ, ದಿವಂಗತ ರೇವತಿ ಮಧ್ಯಸ್ಥ ಸ್ಮಾರಕ ನಿಧಿಯನ್ನು ಅಶಕ್ತರಿಗೆ ವಿತರಿಸಲಾಯಿತು. ಸ್ನೇಹಕೂಟ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು.