ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ

ಯಲಬುರ್ಗಾ ತಾಲೂಕಿನ ಬಂಡಿಹಾಳದ ಬಾಲಪ್ಪ ಚಿಗರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾಳಿಕೋಟೆಯ ಮಹಾಂತ ದೇವರು, ಉಪನ್ಯಾಸಕ ಸಂಗಪ್ಪ ಗುಳಗಣ್ಣನವರ, ಮುಖ್ಯಶಿಕ್ಷಕ ಪರಪ್ಪ ಸೊಬಗಿನ, ಶಿಕ್ಷಕ ಮಲ್ಲಿಕಾರ್ಜುನ ಕೊಡದಾಳ, ವಿದ್ಯಾರ್ಥಿಗಳಾದ ಸಂತೋಷ ಬಂಡ್ರಿ, ಕಳಕನಗೌಡ ಹೊಸಳ್ಳಿ, ವಿದ್ಯಾಶ್ರೀ ಶ್ರೀಗರಿ, ಯಲ್ಲಮ್ಮ ತಳವಾರ ಇತರರಿದ್ದರು.

Published on

ಯಲಬುರ್ಗಾ: ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ. ಗುರುಗಳನ್ನು ಗೌರವಿಸುವ ಶಿಷ್ಯ ಬಳಗದ ಕಾರ್ಯ ಮೆಚ್ಚುವಂತದ್ದು ಎಂದು ಉಪನ್ಯಾಸಕ ಸಂಗಪ್ಪ ಗುಳಗಣ್ಣನವರ ಹೇಳಿದರು.

ತಾಲೂಕಿನ ಬಂಡಿಹಾಳ ಗ್ರಾಮದ ಶ್ರೀ ಬಾಲಪ್ಪ ಚಿಗರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ 10ನೇ ತರಗತಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಲನ್ನು ಮೂರ್ತಿಯನ್ನಾಗಿಸುವ ಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಆದರ್ಶ ವ್ಯಕ್ತಿಯನ್ನಾಗಿಸುತ್ತಾರೆ. ಗುರು-ಶಿಷ್ಯ ಪರಂಪರೆ ಹಿಂದಿನಿಂದಲು ಇದೆ. ಪ್ರಾಥಮಿಕ ಹಂತದ ಶಿಕ್ಷಣವೇ ಬದುಕಿಗೆ ದಾರಿದೀಪವಾಗಲಿದೆ. ಗುಣಮಟ್ಟದ ಶಿಕ್ಷಣ ನೀಡಿದ ಗುರುಗಳಿಗೆ ಸತ್ಕರಿಸುವ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಕ ಮಲ್ಲಿಕಾರ್ಜುನ ಕೊಡದಾಳ ಮಾತನಾಡಿ, ಶಿಕ್ಷಕರು-ವಿದ್ಯಾರ್ಥಿಗಳು ಒಂಡೆದೆ ಸೇರುವುದು ಹರ್ಷ ತಂದಿದೆ. ಸಮಾಜ ಉತ್ತಮ ಸ್ಥಿತಿಯಲ್ಲಿ ಇರಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು. ತಾಳಿಕೋಟೆಯ ಮಹಾಂತ ದೇವರು ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಲು ಸಂಸ್ಕಾರ, ದೇಶಾಭಿಮಾನ, ಇತಿಹಾಸ ಪರಿಚಿಯಿಸಿದ ಶಿಕ್ಷಕರ ಶ್ರಮವೇ ಕಾರಣ ಎಂದರು. ವಿದ್ಯಾರ್ಥಿಗಳು ಶಿಕ್ಷಕರನ್ನು ಕುರಿತು ಮಾತನಾಡಿದರು. ಹೂಮಳೆಗರೆದು ಶಿಕ್ಷಕರನ್ನು ಸ್ವಾಗತಿಸಿದರು.

ಮುಖ್ಯಶಿಕ್ಷಕ ಪರಪ್ಪ ಸೊಬಗಿನ, ಶಿಕ್ಷಕರಾದ ವೀರನಗೌಡ ಪಾಟೀಲ, ಹನುಮಂತಪ್ಪ ಭಜಂತ್ರಿ, ಬಸವರಾಜ ಕುದರಿಮನಿ, ಬಸವರಾಜ ಮುಗಳಿ, ಹಳೇ ವಿದ್ಯಾರ್ಥಿ ಪ್ರತಿನಿಧಿಗಳಾದ ಸಂತೋಷ ಬಂಡ್ರಿ, ಕಳಕನಗೌಡ ಹೊಸಳ್ಳಿ, ಕಳಕನಗೌಡ ಪಾಟೀಲ, ರೈಮಾನ್ ಸಾಬ್, ಕಲ್ಲಮ್ಮ ಛಟ್ಟಿ, ಈರಮ್ಮ ತಲ್ಲೂರು, ವಿದ್ಯಾಶ್ರೀ ಶ್ರೀಗರಿ, ಯಲ್ಲಮ್ಮ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net