ನೌಕರರ ಸಹಕಾರದಿಂದ ನವ ಭಾರತ ನಿರ್ಮಾಣ

FotoJet
Published on

ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಅಭಿಪ್ರಾಯ ಹೇಳಿಕೆ

 ಪಾವಗಡ: ನವ ಭಾರತ ನಿಮಾರ್ಣದಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯವಾಗಿದೆ ಎಂದು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್​ಎಸ್​ಕೆ ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಪಾವಗಡ ಶಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಕ್ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರು ಒಗ್ಗಟ್ಟಾಗಿ ತಮ್ಮ ಹಕ್ಕು ಬಾಧ್ಯತೆಗಳಿಗಾಗಿ ಹೋರಾಡಿದರೆ ಮಾತ್ರ ಸರ್ಕಾರ ತಮ್ಮ ಕಡೆ ಗಮನ ಹರಿಸುತ್ತದೆ. ತಾನು ಅಧ್ಯಕ್ಷನಾದ ಮೇಲೆ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನೌಕರರ ಪರವಾಗಿ 27 ಸರ್ಕಾರಿ ಆದೇಶವನ್ನು ಮಾಡಿಸಿದ್ದೇನೆ. ಸರ್ಕಾರದ ಸೂಚನೆ, ಆಶಯ, ಯೋಜನೆಯಂತೆ ಕಚೇರಿಯಲ್ಲಿ ಕೆಲಸ ನಿರ್ವಹಿಸಬೇಕು. ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನಿರೀಕ್ಷಣಾ ಮಂದಿರದಿಂದ ಮೆರವಣಿಗೆ ಹೊರಟು, ಅಂಬೇಡ್ಕರ್​ ಪುತ್ಥಳಿಗೆ ಹೂ ಮಾಲೆ ಹಾಕಿ, ನಂತರ ನೂತನ ಸರ್ಕಾರಿ ನೌಕರರ ಸಂಘದ ಕಚೇರಿಯನ್ನು ಅಧ್ಯಕ್ಷ ಷಡಾಕ್ಷರಿ ಉದ್ಘಾಟಿಸಿದರು.

ಸ್ಥಳಿಯ ಶಾಸಕರು, ತಹಸೀಲ್ದಾರ್​ ಡಿ.ಎನ್​ ವರದರಾಜು, ನೌ.ಸಂ.ಮಧುಗಿರಿ ಜಿಲ್ಲಾದ್ಯಕ್ಷ ರಂಗಪ್ಪ, ಪುರಸಭೆ ಅಧ್ಯಕ್ಷ ಸುದೇಶ್​ ಬಾಬು, ಎಸ್​ಎಸ್​ಕೆ ಸಂಘದ ಅಧ್ಯಕ್ಷರಾದ ಅನಿಲ್​ ಕುಮಾರ್​, ತಾಲೂಕು ಕಾರ್ಯದರ್ಶಿ ಮಾರುತೇಶ್​, ಖಜಾಂಚಿ ಶೇಖರ್​ ಬಾಬು, ಉಪಾಧ್ಯಕ್ಷ ರಾಜುನಾಯ್ಕ ಸೇರಿ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಘದ ಅಧ್ಯಕ್ಷರು, ಉಪಾದ್ಯಕ್ಷರು, ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net