

ಬೀಳಗಿ:ರಕ್ತದಾನ ಒಂದು ಮಹಾದಾನವಾಗಿದೆ. ಇದರಿಂದ ಇನ್ನೊಬ್ಬರ ಜೀವವನ್ನು ಉಳಿಸುವ ಪ್ರಮುಖ ಕಾರ್ಯವಾಗಿದೆ ಎಂದು ಎಸ್.ಆರ್. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯ ಎಸ್.ಆರ್.ಪಾಟೀಲ ಹೇಳಿದರು.ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ ಶುಕ್ರವಾರ ಬೀಳಗಿ ಪ್ರಾದೇಶಿಕ ಅರಣ್ಯ ವಲಯ ಸಹಯೋಗದಲ್ಲಿ 71ನೇ ವನ್ಯಜಿವಿ ಸಪ್ತಾಹದ ಅಂಗವಾಗಿ ಮಾನವ& ವನ್ಯಜಿವಿ ಸಹಬಾಳ್ವೆ ವಿಷಯಾಧಾರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ರಕ್ತದಾನವು ಅತ್ಯಗತ್ಯ ಸಂದರ್ಭದಲ್ಲಿ (ಅಪಘಾತ ಶಸ್ತ್ರಚಿಕಿತ್ಸೆ ಇತ್ಯಾದಿ) ರೋಗಿಗಳಿಗೆ ಜೀವದಾನ ನೀಡುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದರು.
ಪ್ರತಿಯೊಬ್ಬರು ಪರಿಸರ ಪ್ರೇಮಿಯಾಗಿ ಪ್ರತಿಯೊಂದು ಮನೆಯ ಮುಂದೆ ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿ ನೆಟ್ಟು ಅವುಗಳ ಸಂರಣೆ ಮಾಡುವುರಿಂದ ಉತ್ತಮವಾದ ಪರಿಸರ ಮಾಲಿನ್ಯದಿಂದ ತಡೆಗಟ್ಟುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಎಸ್.ಆರ್. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಡೀನ್ ಡಾ. ಧರ್ಮರಾಯ ಇಂಗಳೆ, ವೈದ್ಯಕಿಯ ಅಧೀಕ ಡಾ. ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ. ರಾವೇಂದ್ರ ಪಾಟೀಲ, ಮುಖ್ಯ ಲೆಕ್ಕಾಧಿಕರು ಅಶೋಕ ದಾದಮಿ, ವಲಯ ಅರಣ್ಯಾಧಿಕಾರಿ ಅಮೃತ ಗಂಡೋಶಿ, ಉಪ ವಲಯ ಅರಣ್ಯಾಧಿಕಾರಿ ಎ.ಆರ್. ದಾವಣಗೇರಿ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.
ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ ಶುಕ್ರವಾರ ಬೀಳಗಿ ಪ್ರಾದೇಶಿಕ ಅರಣ್ಯ ವಲಯ ಸಂಹಯೋಗದಲ್ಲಿ 71ನೇ ವನ್ಯಜಿವಿ ಸಪ್ತಾಹದ ಶಿಬಿದರಲ್ಲಿ ಸಸಿಗೆ ನೀರುಣಿಸುವ ಕಾರ್ಯಕ್ರಮಕ್ಕೆ ಸಂಸ್ಥೆ ಸಂಸ್ಥಾಪಕ ಅಧ್ಯ ಎಸ್.ಆರ್. ಪಾಟೀಲ ಚಾಲನೆ ನೀಡಿದರು. ಡೀನ್ ಡಾ. ಧರ್ಮರಾಯ ಇಂಗಳೆ, ವಲಯ ಅರಣ್ಯಾಧಿಕಾರಿ ಅಮೃತ ಗಂಡೋಶಿ ಇದ್ದರು.