ಆರೋಗ್ಯವಂತ ಸಮಾಜ ನಿರ್ಮಾಣ

shibira
ಸಂತೆಕಟ್ಟೆಯಲ್ಲಿ ರಕ್ತದಾನ ಶಿಬಿರವನ್ನು ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಡಾ.ಕಾರ್ತಿಕ್ ಐತಾಳ್ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ರಕ್ತದಾನ ಶ್ರೇಷ್ಠ ದಾನ ಎಲ್ಲರೂ ಮಹತ್ ಕಾರ್ಯದಲ್ಲಿ ಭಾಗವಹಿಸಬೇಕು. ಅನೇಕ ಸಂದರ್ಭಗಳಲ್ಲಿ ರಕ್ತದ ಕೊರತೆ ಜನರನ್ನು ಕಾಡುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ರಕ್ತದಾನದ ಪಾತ್ರ ಮಹತ್ವದ್ದು ಎಂದು ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಹಾಗೂ ವೈದ್ಯ ಡಾ.ಕಾರ್ತಿಕ್ ಐತಾಳ್ ಹೇಳಿದರು.

ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಕಟ್ಟೆಯಲ್ಲಿ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರು, ಫೆಡರಲ್ ಬ್ಯಾಂಕ್ ಹೆಬ್ರಿ, ಸಂತೆಕಟ್ಟೆ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೇತಾಜಿ ಭಾರತ ಸೇವಾದಳ, ಕಳ್ತೂರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮೀತಿ, ಸಂತೆಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸಂತೆಕಟ್ಟೆ ರಿಕ್ಷಾ ಮತ್ತು ಗೂಡ್ಸ್ ವಾಹನ ಮಾಲೀಕರ ಮತ್ತು ಚಾಲಕರ ಸಂಘ, ಶ್ರೀಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಚಾರ, ಶ್ರೀ ವಿವೇಕಾನಂದ ಯುವ ವೇದಿಕೆ ಚಾರ, ಹೊಯ್ಸಳ ಕ್ರಿಕೆಟರ್ಸ್ ಸಂತೆಕಟ್ಟೆ, ಟೀಮ್ ಯುನಿಟಿ ಸರಂಬಳ್ಳಿ, ಶ್ರೀರಾಮ್ ಫ್ರೆಂಡ್ಸ್ ಕುರ್ಪಾಡಿ, ಶ್ರೀ ದುರ್ಗಾ ಕ್ರಿಕೆಟರ್ ಸಂತೆಕಟ್ಟೆ ಆಶ್ರಯದಲ್ಲಿ ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಭಾರತ ಸೇವಾದಳ ವತಿಯಿಂದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಂತಿನಿಕೇತನ ಸಂಸ್ಥಾಪಕ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ರಕ್ತದಾನ ವಿಭಾಗ ಮುಖ್ಯಸ್ಥೆ ಡಾ.ವೀಣಾ, ಸಂತೆಕಟ್ಟೆ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಸುರೇಶ್ ಚಂದ್ರ ಕೆ.ಬಾಬು, ಬೆಂಗಳೂರು ನೇತಾಜಿ ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಂಘಟಕಿ ಪದ್ಮಾವತಿ ಗೌಡ, ಸಂತೆಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾಣಾರ, ಸಂತೆಕಟ್ಟೆ ರಿಕ್ಷಾ ಮತ್ತು ಗೂಡ್ಸ್ ವಾಹನ ಮಾಲೀಕರ ಮತ್ತು ಚಾಲಕರ ಸಂಘ ಅಧ್ಯಕ್ಷ ಜಯರಾಮ್, ಶ್ರೀಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಚಾರ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಶ್ರೀ ವಿವೇಕಾನಂದ ಯುವ ವೇದಿಕೆ ಚಾರ ಅಧ್ಯಕ್ಷ ಅಶೋಕ್ ನಾಯ್ಕ ಹಂದಿಕಲ್ಲು, ಹೊಯ್ಸಳ ಕ್ರಿಕೆಟರ್ಸ್ ಸಂತೆಕಟ್ಟೆ ಅಧ್ಯಕ್ಷ ರಾಜೇಶ್ ಆಚಾರ್ಯ, ಟೀಮ್ ಯುನಿಟಿ ಸರಂಬಳ್ಳಿ ಅಧ್ಯಕ್ಷ ರಾಜೇಶ್ ಕುಲಾಲ್, ಶ್ರೀರಾಮ್ ಫ್ರೆಂಡ್ಸ್ ಕುರ್ಪಾಡಿ ಅಧ್ಯಕ್ಷ ಹರೀಶ್ ಸಾವಂತ್ ಕುರ್ಪಾಡಿ, ಶ್ರೀ ದುರ್ಗಾ ಕ್ರಿಕೆಟರ್ ಸಂತೆಕಟ್ಟೆ ಅಧ್ಯಕ್ಷ ಪ್ರದೀಪ್, ಶಾಂತಿನಿಕೇತನ ಆಡಳಿತ ಮಂಡಳಿ ಸದಸ್ಯರಾದ ಮಹೇಶ್, ನರೇಂದ್ರ, ನವೀನ್ ಶೆಟ್ಟಿ, ನಾಗರಾಜ್, ರಾಜೇಶ್ರೀ, ಕೆ.ಗಣೇಶ್ ಇದ್ದರು. ನರೇಂದ್ರ ಸ್ವಾಗತಿಸಿದರು. ಪೂರ್ಣಚಂದ್ರ ಕುರ್ಪಾಡಿ ಸ್ವಾಗತಿಸಿದರು. ನವೀನ್ ವಂದಿಸಿದರು.

ಯುವಕರು ಸಮಾಜಿಮುಖಿ ಕೆಲಸದಲ್ಲಿ ತೊಡಗಿಕೊಂಡು ಗ್ರಾಮೀಣ ಭಾಗದಲ್ಲಿ ಕ್ರಾಂತಿಕಾರಿ ಯೋಜನೆ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಪ್ರತಿ ವರ್ಷ ರಕ್ತದಾನ ಶಿಬಿರ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಮುಂದೆ ನಿಮ್ಮ ಸಹಕಾರ ಬೇಕಾಗಿದೆ. ರಾಜೇಶ್ ಶಾಂತಿನಿಕೇತನ ಸಂಸ್ಥಾಪಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net