

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಜ್ಞಾನದ ಹಂಬಲ, ಏಕಾಗ್ರತೆ, ಆತ್ಮ ವಿಶ್ವಾಸ, ಸತತ ಪ್ರಯತ್ನ, ಸೇವಾ ಭಾವ, ಆಧ್ಯಾತ್ಮಿಕ ಮನೋಭಾವ ಇದ್ದಾಗ ಮಾತ್ರ ಪರಿರ್ಪೂಣ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಪರಿರ್ಪೂಣ ವ್ಯಕ್ತಿತ್ವವುಳ್ಳ ಪ್ರಜೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹುಬ್ಬಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ಬುದ್ಧಿ ಯೋಗಾನಂದ ಮಹಾರಾಜರು ಹೇಳಿದರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರಂಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾ ಕೇಂದ್ರದ ಕಾರ್ಯದಶಿರ್ ರಾಘವೇಂದ್ರ ಅಂಬೇಕರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಹಿರಿಯರಾದ ಶ್ರೀಧರ ನಾಡಗೀರ, ಅಶೋಕ ಸೋನಕರ, ಶಾಲೆ ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕಣಿರ್, ಗುರುರಾಜ ಅಗಡಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.
ದೀಪಾ ಕುಲಕಣಿರ್ ಸ್ವಾಗತಿಸಿದರು. ಶಾಲೆ ಪ್ರಾಚಾಯೆರ್ ಅನಿತಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಭಟ್ ನಿರೂಪಿಸಿದರು. ಕೃಷ್ಣ ಜೋಶಿ ವಂದಿಸಿದರು.