ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ

national yuva day
ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಪ್ರಮೋದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
Published on

ಬೈಂದೂರು: ಉತ್ತಮ ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಭಾರತೀಯರ ಮತ್ತು ಭಾರತೀಯತೆ ಬಗ್ಗೆ ನಮಗೆ ಅರಿವು ಗೌರವ ಇರಬೇಕು ಎಂದು ಜೆಸಿಐ ಉಪ್ಪುಂದ ಸುಪ್ರಿಂ ಅಧ್ಯಕ್ಷ ಜ್ಯೋತಿ ಜಯರಾಮ ಶೆಟ್ಟಿ ಹೇಳಿದರು.

ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆ ಮತ್ತು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಯುವ ಸಮುದಾಯ ಧಾರ್ಮಿಕ, ಸಾಮಾಜಿಕ ಪ್ರಜ್ಞೆ, ಕಾಳಜಿ ಇಲ್ಲದೆ ಸೂತ್ರ ಹರಿದ ಗಾಳಿಪಟದಂತಾಗಿದೆ. ಕ್ಷಣಿಕ ಸುಖಕ್ಕಾಗಿ ಅತ್ಯಾಚಾರ, ಕೊಲೆ, ಸುಲಿಗೆಯಂತ ಹೇಯಕೃತ್ಯಕ್ಕೆ ಇಳಿದಿದ್ದಾರೆ. ಜೀವನದ ಸಾರ್ಥಕತೆ ಕುರಿತು ಯಾರಲ್ಲೂ ಚಿಂತನೆ ಇಲ್ಲ. ನಿರ್ದಿಷ್ಟ ಗುರಿ, ಚೌಕಟ್ಟು ಬದುಕಿಗೆ ಇಲ್ಲವಾದರೆ ಜೀವನದ ಅರ್ಥವೇ ಕೆಟ್ಟು ಹೋಗುತ್ತದೆ ಎಂದರು.

ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಸಮರ್ ಶೆಟ್ಟಿ, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಉಪಪ್ರಾಂಶುಪಾಲೆ ಲಕ್ಷ್ಮೀ, ಜೆಸಿಐ ವಲಯ ತರಬೇತುದಾರ ಕೃಷ್ಣಮೂರ್ತಿ ಹೈಕಾಡಿ, ನಿಕಟ ಪೂರ್ವಾಧ್ಯಕ್ಷರಾದ ಸುಮಾ ಆಚಾರ್ಯ, ರವಿರಾಜ್, ವಾಯ್ಸ ಪ್ರೆಸಿಡೆಂಟ್ ಸದಸ್ಯೆ ನಾಗರತ್ನಾ ಇದ್ದರು.

ಬಹುಮಾನ ವಿತರಣೆ

ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಹರ್ಷ, ಶಾಂಭವಿ, ಶಕುಂತಳಾ ಭಾಗವಹಿಸಿದ್ದರು. ಸುಸ್ತಿರ ಭವಿಷ್ಯಕ್ಕಾಗಿ ಯುವಜನತೆ, ಯುವ ಪೀಳಿಗೆಯಲ್ಲಿ ಸೇವೆ ಸಲ್ಲಿಸಿರುವ ನಾವುಂದ ಗ್ರಾಪಂ ಸದಸ್ಯ ಪ್ರಮೋದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net