ಸ್ವ ಉದ್ಯೋಗದಿಂದ ಭವಿಷ್ಯ ನಿರ್ಮಾಣ ಸಾಧ್ಯ

blm (1)
Published on

ಕಾರ್ಕಳ: ಯುವಕರು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ವ ಉದ್ಯೋಗದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮೈ ಭಾರತ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ. ಹೇಳಿದರು.

ನಿಟ್ಟೆ ಎನ್‌ಎಂಏಎಂಐಟಿ ಸಂಸ್ಥೆಯ ಎಂಸಿಎ ವಿಭಾಗವು ಮಿನಿಸ್ಟ್ರಿ ಆಫ್ ಯೂತ್ ಅಫೇರ್ಸ್ ಆಂ್ಯಡ್ ಸ್ಪೋರ್ಟ್ಸ್, ಮೈ ಭಾರತ ಉಡುಪಿ ಹಾಗೂ ನಿಟ್ಟೆ ಸ್ಟಾಫ್ ಡೆವಲಪ್ಮೆಂಟ್ ಸೆಂಟರ್ ಸಹಯೋಗದೊಂದಿಗೆ ಇತ್ತೀಚೆಗೆ ನಿಟ್ಟೆ ಎನ್‌ಎಂಎಎಂಐಟಿಯಲ್ಲಿ ನಡೆದ ಬಿಲ್ಡಿಂಗ್ ಫ್ಯೂಚರ್ ಇಂಡಿಯಾ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು.

ನಿಟ್ಟೆ ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಂಣ್ಕರ್ ಮಾತನಾಡಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಸಿಎ ಎಸ್.ಎಸ್.ನಾಯಕ್ ಮಾಹಿತಿ ನೀಡಿದರು. ರಾಮಕೃಷ್ಣ ಆಚಾರ್ಯ, ಮೀರಾ ಮತ್ತಿತರರು ಉಪಸ್ಥಿತರಿದ್ದರು.

ಸಂಯೋಜಕಿ ಮಂಗಳಾ ಶೆಟ್ಟಿ ಮತ್ತು ಸ್ಫೂರ್ತಿ ಪಿ.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಎಂಸಿಎ ವಿಭಾಗದ ಮುಖ್ಯಸ್ಥೆ ಪ್ರೊ.ಮಮತಾ ಬಲಿಪ ಸ್ವಾಗತಿಸಿದರು. ಶುಭಶ್ರೀ ಕಾರಂತ್ ವಂದಿಸಿದರು. ದೀಕ್ಷಿತಾ ಪ್ರಭು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net