

ಶಿರ್ವ: ವಾದಕ ವ್ಯಸನಕ್ಕೆ ಬಲಿಯಾದ ಯುವ ಜನತೆ ಇಂದು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮರ್ಬಾದ್ ಹೇಳಿದರು.
ಬಂಟಕಲ್ಲು ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಟಕ ವತಿಯಿಂದ ರ‌್ಯಾಗಿಂಗ್ ವಿರೋಧಿ ಮತ್ತು ವಾದಕದ್ರವ್ಯ ವಿರೋಧಿ ಕುರಿತು ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಡುಪಿ, ದ.ಕ. ಜಿಲ್ಲೆಯ ಪೊಲೀಸ್ ಇಲಾಖೆ ವಿದ್ಯಾರ್ಥಿಗಳಲ್ಲಿ ವಾದಕದ್ರವ್ಯದ ದುರುಪಯೋಗ ತಡೆಗಟ್ಟಲು ಕೈಗೊಂಡಿರುವ ಹೊಸ ಕ್ರಮ, ಸಂಬಂಧಿತ ಚಟುವಟಿಕೆ ಮೇಲ್ವಿಚಾರಣೆ ವಾಡುವ, ತಡೆಗಟ್ಟುವ ಉದ್ದೇಶದಿಂದ ಕಾಲೇಜಿನಲ್ಲಿ ಸಮಿತಿ ರಚಿಸಲಾಗಿದೆ. ಪ್ರತೀ ಮೂರು ತಿಂಗಳಿಗೊಮ್ಮೆ ಎಲ್ಲಾ ಕಾಲೇಜುಗಳಲ್ಲಿ 10 ಶೇಕಡ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗುತ್ತದೆ. ಸವಾಜದ ರಚನಾತ್ಮಕ ಸದಸ್ಯರಾಗಿ ಜವಾಬ್ದಾರಿ ತೆಗೆದುಕೊಳ್ಳಲು ಯುವಕರನ್ನು ಪ್ರೋತ್ಸಾಹಿಸುತ್ತಾ ಸುರಕ್ಷಿತ, ವಾದಕದ್ರವ್ಯ ಮುಕ್ತ ವಾತಾವರಣ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು. ಸೈಬರ್ ಬೆದರಿಕೆಗೆ ಬಲಿಯಾಗುವುದನ್ನು ತಪ್ಪಿಸುವುದು ಹೇಗೆ ಎಂಬುದರ ಕುರಿತು ಸಲಹೆ ನೀಡಿದರು.
100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದರು. ಸಮಿತಿ ಸಭೆಯಲ್ಲಿ ಪ್ರಾಂಶುಪಾಲರು, ನೋಡೆಲ್ ಅಧಿಕಾರಿ, ಅಧ್ಯಾಪಕರು, ವಿದ್ಯಾರ್ಥಿ ಸದಸ್ಯರು ಉಪಸ್ಥಿತರಿದ್ದರು.