

ನರಸಾಪುರ: ಇಂದಿನ ಯುವ ಪೀಳಿಗೆಯು ದೇಶ ಮತ್ತು ಪ್ರಜಾಪ್ರಭುತ್ವದ ಭವಿಷ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಮೌಲ್ಯಮಾಪನಾಧಿಕಾರಿ ಡಾ.ಕೆ.ತಿಪ್ಪೇಸ್ವಾಮಿ ಹೇಳಿದರು.
ಹೋಬಳಿ ಬೆಳ್ಳೂರು ಗ್ರಾಮದ ರಮಾಮಣಿ ನಗರದ ಎಸ್ಆರ್ಎಸ್ಐ ಶೈಣಿಕ ಸಮೂಹ ಸಂಸ್ಥೆಯಿಂದ ಹಮ್ಮಿಕೊಂಡ ಪದ್ಮಭೂಷಣ ಡಾ.ಬಿಕೆಎಸ್ ಅಯ್ಯಂಗಾರ್ ಅವರ 106ನೇ ಜನ್ಮದಿನಾಚರಣೆ ಮತ್ತು ಪದವಿಪೂರ್ಣ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಏನಾಗದಿದ್ದರೂ ಮೊದಲು ಮಾನವನಾಗಬೇಕು. ಪ್ರಸ್ತುತ ಸಮಾಜದಲ್ಲಿ ವಿದ್ಯಾವಂತರ ಜತೆ ಪ್ರಜ್ಞಾವಂತರ ಅವಶ್ಯಕತೆ ಬಹಳಷ್ಟಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ಮುಂದಾಗಬೇಕಿದೆ. ತಂತ್ರಾನ ಮತ್ತು ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಧುನಿಕ ತಂತ್ರಗಳೊಂದಿಗೆ ವಿದ್ಯಾರ್ಥಿಗಳು ಹೊಸತನ ರೂಢಿಸಿಕೊಳ್ಳಬೇಕು. ಕೌಶಲ
ಬೆಳೆಸಿಕೊಳ್ಳಬೇಕು ಎಂದರು. ಕೋಲಾರ ಟಮಕಾದ ಶ್ರೀ ದೇವರಾಜ ಅರಸು ಮೆಡಿಕಲ್ ಕಾಲೇಜ್ ಉಪಕುಲಪತಿ ಡಾ.ಬಿ.ವೆಂಗಮ್ಮ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಶ್ರಮ ಮತ್ತು ಶಿಕ್ಷಣ ಬಹಳ ಮುಖ್ಯ. ಶಿಕ್ಷಣದಿಂದ ಮಾತ್ರ ಜೀವನ ಶ್ರೇಣಿ ಸುಧಾರಿಸಲು ಸಾಧ್ಯ. ಜನರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದರೆ ಶಿಣದಲ್ಲಿ ಮುಂದುವರೆಯಲು ಸಹಕಾರಿಯಾಗುತ್ತದೆ. ಜತೆಗೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಜೀವನದಲ್ಲಿ ಯೋಗ ಬಹಳ ಮುಖ್ಯ. ಯೋಗ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬಹುದು ಎಂದರು.
ಪ್ರಾಂಶುಪಾಲೆ ಛಾಯಾದೇವಿ ಮಾತನಾಡಿ, ಮುಂಬರುವ ಕಾಲಟ್ಟದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮಸ್ಥಾನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು. ಪದವಿಪೂರ್ಣ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಎಸ್ಎಸ್ಎಲ್ಸಿ, ದ್ವೀತಿಯ ಪಿಯು ಮತ್ತು ಪದವಿ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಕೆಎಸ್ಎಸ್ ನ ವ್ಯವಸ್ಥಾಪಕ ಟ್ರಸ್ಟಿ ಆರ್.ಶರಣ್ಕುಮಾರ್, ಕೋಲಾರ ಕೆಎಸ್ಆರ್ಟಿಸಿ ವಿಭಾಗದ ನಿಯಂತ್ರಕ ಎನ್.ಶ್ರೀನಾಥ್ ಹಾಜರಿದ್ದರು.