

ವಿಜಯಪುರ: ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಮಾನವನಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ, ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದರು ಎಂದು ಸಾಹಿತಿ ಮನು ಪತ್ತಾರ ಹೇಳಿದರು.
ನಗರದ ಅಥಣಿ ರಸ್ತೆಯ ಸೇನಾ ನಗರದ ಲಕ್ಷಿ$್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಮಾಸಿಕ ಸತ್ಸಂಗದಲ್ಲಿ ಬೆಳದಿಂಗಳ ಬೆಳಕಿನೆಡೆಗೆ ಎಂಬ ಕಾರ್ಯಕ್ರಮದಲ್ಲಿ ಶರಣರ ಅನುಭಾವ ವಿಷಯ ಕುರಿತು ಮಾತನಾಡಿದ ಅವರು, ನಮ್ಮ ನಡೆ&ನುಡಿ ಒಂದಾದರೆ ಮಾತ್ರ ಆ ದೇವರು ನಮಗೆ ಒಲಿಯುತ್ತಾನೆ ಎಂಬ ಭಾವ ಬಸವಣ್ಣನವರ ವಚನದಲ್ಲಿವೆ ಎಂದರು.
ಬಸವಣ್ಣನವರು ತಮ್ಮ ವಚನದಲ್ಲಿ ಜೀವನ ಮತ್ತು ಮೌಲ್ವಿಕ ವಿಚಾರಧಾರೆಗಳ ಬಗ್ಗೆ ತಿಳಿಸಿದ್ದಾರೆ. ಶ್ರೇಷ್ಠ ದಾರ್ಶನಿಕರ ವೈಚಾರಿಕತೆ, ಮೌಲ್ವಿಕ, ನೈತಿಕ, ಜೀವನಾನುಭವ ನೀಡುವ ಎಲ್ಲ ವಚನಾಮೃತಗಳು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ವಚನಗಳು ಕೇವಲ ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಶರಣರ ಸಂದೇಶಗಳನ್ನು ಅರ್ಥೈಸಿಕೊಂಡು ಉತ್ತಮ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವಲ್ಲಿ ಕ್ರಿಯಾಶೀಲರಾಗಬೇಕು ಎಂದು ಸಲಹೆ ನೀಡಿದರು.
ಪ್ರೊ. ಎಂ.ಆರ್. ಉಕುಮನಾಳಮಠ ಮಾತನಾಡಿ, ನಮ್ಮಲ್ಲಿರುವ ಧನ, ಅಧಿಕಾರ, ಆಸ್ತಿ, ಸಂಪತ್ತು ಯಾವುದೂ ಶಾಶ್ವತವಲ್ಲ. ಅವನೆಲ್ಲ ಬಳಸಿದಂತೆ ಖಾಲಿಯಾಗುತ್ತದೆ. ಆದರೆ, ಮನುಷ್ಯನ ಸಂತೃಪ್ತಿದಾಯಕ ಭಾವ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಸಿಗಲಿದೆ ಎಂದರು.
ಲಕ್ಷಿ$್ಮ ದೇವಸ್ಥಾನದ ನಿರ್ದೇಶಕಿ ಕಸ್ತೂರಿ ಸಾವಳಗಿ, ಎಸ್.ಕೆ. ಕಡಕೋಳ ವೇದಿಕೆಯಲ್ಲಿದ್ದರು.
ರಾಜಶೇಖರ ಉಮರಾಣಿ, ಗುರುಬಸಯ್ಯ ಹಿರೇಮಠ, ಡಾ. ರಾಜಕುಮಾರ ಡೊಳ್ಳಿ, ಸಾಹಿತಿಗಳಾದ ಬಿ.ಡಿ. ಕುಂಬಾರ. ಎಂ.ಎಸ್. ಖೊದ್ನಾಪೂರ, ಸಿದ್ದು ಯರನಾಳ, ಆರ್.ಕೆ. ಕಪಾಳಿ, ಶಾಂತಾ ಕಪಾಳಿ, ಶೋಭಾ ಚವ್ಹಾಣ ಮತ್ತಿತರರಿದ್ದರು.