ಸುಸಂಸ್ಕೃತ ಸಮಾಜ ನಿರ್ಮಾಣ ಮುಖ್ಯ

5 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜ ಶ್ರೀಮಂತವಾಗಬೇಕು. ಆದರೆ ಶ್ರೀಮಂತಿಕೆಗಿಂತ ಸುಸಂಸ್ಕೃಸಮಾಜ ನಿರ್ಮಾಣ ಮುಖ್ಯ ಎಂದು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ನಗರದ ದೈವಜ್ಞ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ನೀಡಿದಾಗಲೇ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಪಾಲಕರು ಶಿಕ್ಷಣದಷ್ಟೇ ಮಕ್ಕಳ ಏಳಿಗೆಗೆ ಆದ್ಯತೆ ನೀಡಬೇಕು. ರೇಖಾ ರಾಯ್ಕರ ಕುಮಾರ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡಿ. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಲ್ಲದೆ, ಅವರ ಕನಸಿಗೆ ಶಕ್ತಿ ನೀಡುವ ಮೂಲಕ ನನಸು ಮಾಡಲು ಅವಕಾಶ ಕಲ್ಪಿಸಿ. ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘದ ಕಾರ್ಯ ಶ್ಲಾಘನೀಯ. ನಾವೆಲ್ಲರೂ ಒಂದಾಗಿ ಇಡೀ ಸಮಾಜವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಯತ್ನ ಮಾಡಬೇಕು ಎಂದರು.

ಮನೋಜ ಕುಮಾರ, ಹೆಸ್ಕಾಂ ಜಿಎಂ ವಿನಾಯಕ ಪಾಲನಕರ, ಎಸಿಪಿ ಪ್ರಶಾಂತ ಸಿದ್ದನಗೌಡರ, ಮೇಜರ್​ ಸಂದೇಶ ಕುರಡೇಕರ, ಮಾಜಿ ಶಾಸಕ ಗಂಗಾಧರ ಭಟ್​ ಮಾತನಾಡಿದರು. ಸಂಘದ ಅಧ್ಯಕ್ಷ ರವಿ ಗಾಂವಕರ ಅಧ್ಯಕ್ಷತೆ ವಹಿಸಿದ್ದರು.

ಸಮಾಜದ ಹಿರಿಯರಿಗೆ, ಸೇವಾ ಸಂಘ, ಯುವಕ ಮಂಡಳ ಹಾಗೂ ಮಹಿಳಾ ಮಂಡಳದ ಮಾಜಿ ಪದಾಧಿಕಾರಿಗಳು ಹಾಗೂ ಹಾಲಿ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಶ್ರೀಗಳಿಗೆ ರ್ಪೂಣಕುಂಭ ಸ್ವಾಗತ, ಪದಾಪೂಜೆ ಹಾಗೂ ಶ್ರೀ ಗಣೇಶ ಲಕ್ಷ ಮೋದಕ ಹವನದ ಪೂರ್ಣಾಹುತಿ ನೆರವೇರಿದವು.

ಕೋಶಾಧ್ಯಕ್ಷ ರಾಮಚಂದ್ರ ಶೇಟ, ಸಾಯಿರಾಮ ವೆರ್ಣೇಕರ, ನಿರ್ದೇಶಕರಾದ ಗಜಾನನ ರಾಯ್ಕರ, ಸಂತೋಷ ರಾಯ್ಕರ, ವಲ್ಲಭ ಪಾವುಸ್ಕರ, ಅಜಿತ ಗಾಂವಕರ, ಶ್ರೀಕಾಂತ ರಾಯ್ಕರ, ಗಿರೀಶ ಡೊಮ್ನೆಕರ, ಸೀತಾರಾಮ ರೇವಣಕರ, ಪ್ರಶಾಂತ ವೆರ್ಣೇಕರ, ಮಹಿಳಾ ಮಂಡಳ ಪದಾಧಿಕಾರಿಗಳು, ಸಮಾಜ ಬಾಂಧವರು, ಇತರರು ಇದ್ದರು.

ಉದಯ ರಾಯ್ಕರ ಸ್ವಾಗತಿಸಿದರು. ವಸಂತ ಅಣವೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಶ್ರೀಧರ ಶೇಟ್​ ವಂದಿಸಿದರು.

ಸಂಜೆ ಮಂಗಳೂರು ದೈವಜ್ಞ ಸಮಾಜದ ರೂಪೇಶ ಶೇಟ್​ ತಂಡದಿಂದ ಭಸ್ಮಾಸುರ ಮೋಹಿನಿ ರೂಪಕ ಹಾಗೂ ಕುಂದಾಪುರದ ಸತೀಶ ಪೈ ಕುಳ್ಳಪ್ಪು ಸಂಗಡಿಗರಿಂದ ಮೂರುಮುತ್ತು ಹಾಸ್ಯಮಯ ಕೊಂಕಣಿ ನಾಟಕ ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net