ಶತಮಾನೋತ್ಸವ ಭವನ ನಿರ್ಮಾಣಕ್ಕೆ ತೀರ್ಮಾನ

building
Published on

ಕುಶಾಲನಗರ:

ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಆರಂಭಗೊAಡ ಸರ್ಕಾರಿ ಕನ್ನಡ ಶಾಲೆ ಎಂಬ ಹೆಮ್ಮೆಗೆ ಪಾತ್ರವಾದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಶಾಲೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಭವಿಷ್ಯ ರೂಪಿಸಿದ ಈ ಶಾಲೆಯ ಋಣ ಸಂದಾಯವಾಗಿ ಶತಮಾನೋತ್ಸವ ಆಚರಿಸಲು ಹಳೆಯ ವಿದ್ಯಾರ್ಥಿಗಳ ಹಾಗೂ ಊರಿನ ಹಿರಿಯರನ್ನು ಒಳಗೊಂಡAತೆ ಆಚರಣಾ ಸಮಿತಿಯನ್ನು ರಚನೆ ಮಾಡಲಾಗಿದೆ. 2011ರಲ್ಲಿಯೇ ಶತಮಾನೋತ್ಸವ ಆಚರಣೆ ಆರಂಭಗೊAಡು ರೂಪುರೇಷ ಸಿದ್ಧಪಡಿಸಲಾಗಿತ್ತು. ಇದೀಗ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಿ ಭವಿಷ್ಯ ರೂಪಿಸಿದ ಈ ಶಾಲೆಯ ಸವಿನೆನಪಿಗಾಗಿ 8 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಲ್ಪಿ ಅರವಿಂದ ಉಪಾಧ್ಯಾಯ ಅವರಿಂದ ಕಟ್ಟಡದ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. 750 ಮಂದಿಗೆ ಆಸನ ವ್ಯವಸ್ಥೆಯಾಗುವಂತೆ ಸಭಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ಇರುವ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವ್ಯಸ್ಥೆಯಲ್ಲಿದ್ದು, ಹಳೆಯ ಕಟ್ಟಡವನ್ನು ತೆರವುಗೊಳಿಸಿ ಭವ್ಯವಾದ ಶತಮಾನೋತ್ಸವ ಭವನ ನಿರ್ಮಿಸಲಾಗುತ್ತದೆ. ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಸಂಪರ್ಕ ಮಾಡಿ ಸಹಕಾರ ಕೋರಲಾಗುತ್ತದೆ.

ಏ.13 ರಂದು ಸಭೆ : ಏಪ್ರಿಲ್ 13 ರಂದು ಹಳೆಯ ವಿದ್ಯಾರ್ಥಿಗಳ ಸಭೆ ಕರೆಯಲಾಗಿದೆ. ಶಾಲೆಯ ಸಭಾಂಗಣ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಹಳೆಯ ವಿದ್ಯಾರ್ಥಿಗಳು ಸಭೆಗೆ ಹಾಜರಾಗಿ ಸೂಕ್ತ ಸಲಹೆ ನೀಡಬೇಕು. ಜತೆಗೆ ಸದಸ್ಯತ್ವ ನೊಂದಾಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ನೂತನ ಸಮಿತಿ : ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷರಾಗಿ ನಜೀರ್ ಅಹಮ್ಮದ್, ಅಧ್ಯಕ್ಷರಾಗಿ ವಿ.ಪಿ. ಶಶಿಧರ್, ಉಪಾಧ್ಯಕ್ಷರಾಗಿ, ಎಂ ವಿ ನಾರಾಯಣ, ಎಂ.ಕೆ. ದಿನೇಶ್, ಟಿ.ಆರ್. ಶರವಣ ಕುಮಾರ್, ಕಾರ್ಯದರ್ಶಿಯಾಗಿ ವಕಿಲÀ ಆರ್.ಕೆ. ನಾಗೇಂದ್ರ ಬಾಬು, ಖಜಾಂಚಿಯಾಗಿ ಎಸ್.ಕೆ. ಸತೀಶ್ ಸಂಚಾಲಕರಾಗಿ ಜೋಸೆಪ್ ಸೋನ್ಸ್ ವಿಕ್ಟರ್, ಸಹ ಕಾರ್ಯದರ್ಶಿ ಎಂ.ವಿ. ಮೊಯ್ದು, ಮಾಧ್ಯಮ ಕಾರ್ಯದರ್ಶಿಗಳಾಗಿ ಬಿ.ಎಸ್. ಲೋಕೇಶ್ ಸಾಗರ್ ಮತ್ತು ವನಿತಾ ಚಂದ್ರಮೋಹನ್, ಸದಸ್ಯರಾಗಿ ವಿ.ಡಿ. ಪುಂಡರೀಕಾಕ್ಷ, ವಿ,ಎಸ್. ಆನಂದ ಕುಮಾರ್, ಬಿ.ಆರ್. ನಾಗೇಂದ್ರ ಪ್ರಸಾದ್, ಹೆಚ್. ಟಿ. ವಸಂತ್,.ಎಚ್. ಎನ್. ಚಂದ್ರು, ಡಿ.ವಿ. ರಾಜೇಶ್, ಬಿ. ಶಬೀರ್ ಆಹಮದ್, ಲತಾ ನಂದಕುಮಾರ್, ವಿಜಯ್ ಕುಮಾರ್, ಬಿ.ಎಸ್. ಚಂದನ್, ಇಮ್ಯಾನ್ಯುಯಲ್ ಅಂತೋಣಿ, ಎಂ. ಡಿ. ರಂಗಸ್ವಾಮಿ, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಮೂವತ್ತು ಜನರು ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಮುಖಂಡರಾದ ಎಂ.ಕೆ. ದಿನೇಶ್, ಎಸ್.ಕೆ. ಸತೀಶ್, ಮೋಹಿದ್ದೀನ್, ಎಂ.ವಿ. ನಾರಾಯಣ್, ವನಿತಾಚಂದ್ರಮೋಹನ್, ಚಂದ್ರು, ವಿ.ಎಸ್.ಆನಂದ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net