ಸೈಟ್ ಹಾಗೂ ಕಟ್ಟಡ ಕಾಮಗಾರಿ ನೆಪದಲ್ಲಿ 62 ಲಕ್ಷ ರೂ. ವಂಚನೆ

Fruad
Published on


ಮಂಗಳೂರು: ಸೈಟ್ ಹಾಗೂ ಕಟ್ಟಡ ಕಾಮಗಾರಿ ನೆಪದಲ್ಲಿ ಸಂಸ್ಥೆಯೊಂದರ ಮುಖ್ಯಸ್ಥರು 62 ಲಕ್ಷ ರೂ. ವಂಚನೆಗೈದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸ್ಕೈಲೈನ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ನಿರ್ದೇಶಕರುಗಳಾದ ದೀರಜ್ ್ರಭು, ಸಂತೋಷ ಕುಮಾರ ಸೋನಿ ಮತ್ತು ಎಟರ್ನಿಟಿ ಡೆವಲಪರ್ಸ್‌ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಹಾಗೂ ಅದರ ನಿರ್ದೇಶಕರು ಸಂತೋಷ ಕುಮಾರ ಸೋನಿ ಮತ್ತು ಪವನ ಸಾಹನಿ ಇವರು ರೋನಾಲ್ಡ್ ಎಲ್. ಮೆಂಡೋನ್ಸಾ ಅವರಿಗೆ ಮಂಗಳೂರಿನ ಮೇರಿಹಿಲ್ನಲ್ಲಿ ಅತ್ಯಾಧುನಿಕ ಸೌಕರ್ಯ ಮತ್ತು ವ್ಯವಸ್ಥೆಗಳನ್ನು ಒಳಗೊಂಡ ಅಂತರಾಷ್ಟ್ರೀಯ ಗುಣಮಟ್ಟದ ವಿಲ್ಲಾ ಸೈಟ್ ಮತ್ತು ಅದರ ಕಟ್ಟಡ ಕಾಮಗಾರಿ ಮಾಡಿ ಕೊಡುವುದಾಗಿ ಹೇಳಿ 62,08,000 ರೂ. ಚೆಕ್ಕಿನ ರೂಪದಲ್ಲಿ ಪಡೆದಿದ್ದಾರೆ. ಕಂಪೆನಿಯಾ ಒಪ್ಪಂದದಂತೆ 2012 ನೇ ಸಾಲಿಗೆ ಎಲ್ಲಾ ಸೈಟ್‌ನಲ್ಲಿ ಮನೆಯನ್ನು ನಿರ್ಮಿಸಿ ಕೊಡಬೇಕಿತ್ತು. ಆದರೆ ಆರೋಪಿ ಕಂಪನಿಯವರು ಹಲವು ಬಾರಿ ಬಡಾವಣೆಯ ನಕ್ಷೆ ಮತ್ತು ವಿನ್ಯಾಸವನ್ನು ಬದಲಾವಣೆ ಮಾಡಿ ಮೆಂಡೋನ್ಸಾರಿಗೆ ಮೋಸ ಮತ್ತು ವಂಚನೆ ಮಾಡಿದ್ದಾರೆ.


ಮೆಂಡೋನ್ಸಾ ಹಲವು ಬಾರಿ ಆರೋಪಿ ಕಂಪನಿಗೆ ಪೋನ್ ಇ-ಮೈಲ್ಗಳ ಮುಖಾಂತರ ಸಂಪರ್ಕಿಸಿದ್ದು, ಈವರಗೆ ಯಾವುದೇ ಪ್ರಯೋಜನಾವಾಗಲಿಲ್ಲ. ಕಂಪನಿಯ ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಮಾನಸ ಟವರ್‌ನಲ್ಲಿ ಇರುವ ಕಚೇರಿಗೆ ಹಲವು ಭಾರಿ ಭೇಟಿ ನೀಡಿದ್ದರು. ಹಲವು ಬಾರಿ ಹೊರ ದೇಶದಿಂದ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಮಂಗಳೂರಿನ ಆರೋಪಿಯ ಕಂಪನಿಗೆ ಭೇಟಿ ನೀಡಿದರು. ಆರೋಪಿ ಕಂಪನಿಯವರು ಹಣವನ್ನು ಪಡೆದ ಮೇಲೆ ಬಡಾವಣೆ ಮತ್ತು ಮನೆಯ ನಿರ್ಮಾಣವನ್ನು ಮಾಡದೆ ವಂಚನೆಯ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net