ಮದಕರಿ ವೃತ್ತದಲ್ಲಿ ಆಟೋ ನಿಲ್ದಾಣ ನಿರ್ಮಿಸಿ

20 KUDLAGI 02
ಕೂಡ್ಲಿಗಿ ಮದಕರಿ ವೃತ್ತದಲ್ಲಿ ಆಟೋ ಚಾಲಕರು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಕಾರ್ಯದರ್ಶಿ ಜೆ.ಕುಮಾರಸ್ವಾಮಿ, ಅನಂತ ಕುಮಾರ್, ಡಿ.ಚೌಡಪ್ಪ, ರಮೇಶ, ರಾಘವೇಂದ್ರ, ಅಜೀಜ್, ಉಮರ್, ಗಾಳ್ಯಾನಾಯ್ಕಾ, ದುರುಗಪ್ಪ ಇತರರಿದ್ದರು.
Published on

ಕೂಡ್ಲಿಗಿ: ಪಟ್ಟಣದ ಮದಕರಿ ವೃತ್ತದಲ್ಲಿ ಆಟೋ ನಿಲ್ದಾಣದ ಬದಲು ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ ವತಿಯಿಂದ ಸೋಮವಾರ ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಎಂ. ಮಯೂರ ಮಂಜುನಾಥ ಮಾತನಾಡಿ, 30 ವಷರ್ಗಳಿಂದ ಪಟ್ಟಣದ ಮದಕರಿ ವೃತ್ತದಲ್ಲಿ ಆಟೋಚಾಲಕರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಆಟೋ ಚಾಲಕರು ಆಟೋ ಚಾಲನೆ ಮಾಡಿ ಕುಟುಂಬ ಸಲುಹುತ್ತಿದ್ದಾರೆ.

ಈ ಜಾಗದಲ್ಲಿ ಆಟೋ ನಿಲ್ದಾಣ ನಿರ್ಮಿಸಿ ಕೊಡುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಅವರಿಗೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ನಿಲ್ದಾಣ ನಿರ್ಮಿಸಲು ಸರ್ಕಾರದಿಂದ ಹಣ ಮಂಜೂರು ಮಾಡಲಾಗಿದೆ. ಇದುವರೆಗೂ ಆಟೋ ನಿಲ್ದಾಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಶೌಚಗೃಹ ನಿರ್ಮಿಸಲು ಆಟೋ ನಿಲ್ದಾಣದ ಜಾಗವನ್ನು ಅಳತೆ ಮಾಡಿಕೊಂಡು ಹೋಗಿದ್ದಾರೆ.

ಪಪಂ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಈ ಬಗ್ಗೆ ಚರ್ಚಿಸಿ ಆಟೋ ಚಾಲಕರನ್ನು ಒಕ್ಕಲೆಬ್ಬಿಸದೇ ಬೇರೆಡೆ ಜಾಗ ಗುರುತಿಸಿ ಶೌಚಗೃಹ ನಿರ್ಮಾಣ ಮಾಡಬೇಕು. ಇದೇ ಜಾಗದಲ್ಲಿ ಆಟೋ ನಿಲ್ದಾಣ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net