ವಾಲ್ಮೀಕಿ ಭವನ ನಿರ್ಮಿಸಿ ಕೊಡಿ

FotoJet 222
Published on

12ನೇ ವಾರ್ಡ್​ ಸದಸ್ಯ ಮುನಿರಾಜ್​ ಒತ್ತಾಯ

ವೇಮಗಲ್​: ಪಟ್ಟಣದ ಸಿಂಗೇನಹಳ್ಳಿ ಮತ್ತು ಐಬಿ ಪ್ರದೇಶದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದ ನೂರಾರು ಕುಟುಂಬಗಳು ವಾಸವಾಗಿದ್ದು, ನಮ್ಮ ಜನಾಂಗಕ್ಕಾಗಿ ಸೂಕ್ತ ಸರ್ಕಾರಿ ಭವನ ಇಲ್ಲ. ಹಾಗಾಗಿ ನಮ್ಮ ಜನಾಂಗದವರು ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು 12ನೇ ವಾರ್ಡ್​ ಸದಸ್ಯ ಮುನಿರಾಜ್​ ಒತ್ತಾಯಿಸಿದರು.

ಕೋಲಾರ ತಾಲೂಕಿನ ವೇಮಗಲ್​ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ

ಮಾತನಾಡಿ, ನಮ್ಮ ಗ್ರಾಮದ ಸುತ್ತಲೂ ಬೃಹತ್​ ಕೈಗಾರಿಕಾ ಪ್ರದೇಶ ನೆಲೆಗೊಂಡಿರುತ್ತವೆ ಹಾಗೂ ಸಾಯಿ ಆಶ್ರಯ ಆಸ್ಪತ್ರೆ ಸಹ ಶೀಘ್ರದಲ್ಲೇ ಆರಂಭವಾಗುತ್ತಿದೆ. ಆದರೆ, ನಮ್ಮ ಜನಾಂಗಕ್ಕೆ ಸೂಕ್ತ ಮೂಲ ಸೌಲಭ್ಯಗಳು ಇಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದರು.

ಸಿಂಗೇನಹಳ್ಳಿ ಸುತ್ತಮುತ್ತಲೂ ಸುಮಾರು 2,5-30 ಎಕರೆ ಸರ್ಕಾರಿ ಗೋಮಾಳ ಭೂಮಿ ಇದ್ದು, ಇಲ್ಲಿಗೆ ಸಮೀಪವೇ ಇರುವ ಇದೇ ಗ್ರಾಮದ ಸರ್ವೇ ನಂ.56 ರ ಸರ್ಕಾರಿ ಗೋಮಾಳ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ ವಾಲ್ಮೀಕಿ ಭವನ ನಿಮಾರ್ಣಕ್ಕೆ ಜಮೀನು ಮೀಸಲಿಟ್ಟು, ವಾಲ್ಮೀಕಿ ಭವನ ನಿಮಾರ್ಣ ಮಾಡಬೇಕು ಎಂದು ಒತ್ತಾಯಿಸಿದರು.

ಪಪಂ ಮುಖ್ಯ ಅಧಿಕಾರಿ ಎಸ್​.ಎಂ.ವೆಂಕಟೇಶ್​, ಪಪಂ ಸದಸ್ಯರಾದ ಅಂಜಲಿ ಪ್ರಕಾಶ್​, ರಾಮು, ರವಿಚಂದ್ರ, ಲೋಕೇಶ್​, ಮರಿಯಪ್ಪ, ಜಿ.ಮಂಜುಳಾ ಮುನಿರಾಜು, ಸುಬ್ರಮಣ್ಯ, ಕೆ.ಎನ್​.ರಮೇಶ್​, ತಾಸುಪ್​ ಖಾನ್​, ಗಂಗಪ್ಪ, ಮುನಿರಾಜು, ಎಂ.ಶಿಲ್ಪಾಶಂಕರ್​, ವಿ.ಎಂ.ನಾಗೇಶ್​, ದೀಪಾ ವೆಂಕಟೇಶ್​, ಸುಜಾತಾ ಮುನಿರಾಜು, ಶಶಿಕಲಾ ನಾಗೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net