

ಸಿಂಧನೂರು: ಪಟ್ಟಣದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದು ಸಾರ್ವಜನಿಕರು ಗುಣಮಟ್ಟದ ರಸ್ತೆ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.
ತುರ್ವಿಹಾಳ ಪಟ್ಟಣದಲ್ಲಿ ಬುಧವಾರ ಕೆಕೆಆರ್‌ಡಿಬಿ ಯೋಜನೆಯಡಿ 2023-24 ನೇ ಸಾಲಿನ 76.47 ಲಕ್ಷ ರೂ. ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ 2.50 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇದನ್ನು ಓದಿ: ಸಂಚಾರಕ್ಕೆ ಗುಣಮಟ್ಟದ ರಸ್ತೆ ಅತ್ಯವಶ್ಯ
ಕಾಲಮಿತಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ, ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಳಪೆಯಾಗಲು ಅವಕಾಶ ನೀಡುವುದಿಲ್ಲ. ರಸ್ತೆ ಕಾಮಗಾರಿ ಆರಂಭಿಸಿದ ವೇಗದಲ್ಲಿ ಪೂರ್ಣಗೊಳ್ಳಬೇಕು ಎಂದರು.
ಪ್ರಮುಖರಾದ ಶರಣಪ್ಪ ಹೊಸಗೌಡ್ರ, ಯಲ್ಲಪ್ಪ ಭೋವಿ, ಶಂಕರಗೌಡ ದೇವರಮನಿ, ಶರಣಬಸವ ಹಳ್ಳಿ, ಮರಿಯಪ್ಪ ನಾಮದ್, ಅರವಿಂದ ರಡ್ಡಿ, ಫಕೀರಪ್ಪ ಭಂಗಿ, ಮಹಾಂತೇಶ ಗಾಣಗೇರ, ಶಾಮೀದ್‌ಅಲಿ ಅರಬ್, ಭಾಸ್ಕರ್ ನೆಕ್ಕಂಟಿ, ರಾಮಣ್ಣ ರಾಗಲಪರ್ವಿ, ಶರಣಪ್ಪ ಉದ್ಭಾಳ, ಬಿ.ಮರಿಸ್ವಾಮಿ ಕುರುಕುಂದ, ವಾಸು ನೆಕ್ಕಂಟಿ, ಸೂರ್ಯ ನಾಗೇಶ್ವರರಾವ್, ಕೆ.ಪಂಪನಗೌಡ ಇದ್ದರು.