ಹಳೇ ಬಸ್ ನಿಲ್ದಾಣದಲ್ಲಿ ತಂಗುದಾಣ ನಿರ್ಮಿಸಿ

11 KMP 01
ಕಂಪ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್‌ಗೆ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಬಿ.ವಿರೂಪಾಕ್ಷಿ ಯಾದವ್, ಜಗದೀಶ ಪೂಜಾರ್, ಜೆ.ಶಿವಕುಮಾರ್, ಬಿ.ಮಂಜುಳಾ, ಕವಿತಾ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ತಂಗುದಾಣ ನಿರ್ಮಿಸುವಂತೆ ಆಗ್ರಹಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪುರಸಭೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷಗೆ ಮಂಗಳವಾರ ಮನವಿ ಸಲ್ಲಿಸಿದರು.

ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿರೂಪಾಕ್ಷಿ ಯಾದವ್ ಮಾತನಾಡಿ, ಹಳೇ ಬಸ್‌ನಿಲ್ದಾಣ ಬಯಲಿನಿಂದ ಕೂಡಿದ್ದು ಕುರುಗೋಡು, ಸಿರಗುಪ್ಪಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ತಂಗುದಾಣ ಇಲ್ಲದಿದ್ದರಿಂದ ಬಿಸಿಲಿನಲ್ಲಿಯೇ ರಸ್ತೆ ಮೇಲೆ ಬಸ್‌ಗಾಗಿ ಕಾಯುತ್ತ ನಿಲ್ಲಬೇಕಿದೆ. ಅಂಗಡಿ ಬಳಿ ನಿಲ್ಲಲು ವ್ಯಾಪಾರಿಗಳು ಬಿಡುತ್ತಿಲ್ಲ. ಕೂಡಲೇ ಬಸ್ ತಂಗುದಾಣ ನಿರ್ಮಿಸುವಂತೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷೆ ಬಿ.ಮಂಜುಳಾ ಮಾತನಾಡಿ, 12ನೇವಾರ್ಡ್‌ನ ಮಹಿಳಾ ಶೌಚಾಲಯದಲ್ಲಿ ಶುಚಿತ್ವವಿಲ್ಲ. ಬೀದಿ ದೀಪಗಳಿಲ್ಲ. ಚರಂಡಿ ಸ್ವಚ್ಛಗೊಳಿಸದಿದ್ದರಿಂದ ದುರ್ವಾಸನೆಯಿಂದ ಕೂಡಿದೆ. ಸಮರ್ಪಕ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ಸೊಳ್ಳೆ ಹೆಚ್ಚಾಗಿದ್ದು ಫಾಗಿಂಗ್ ಮಾಡಿಸಬೇಕು. ಚರಂಡಿ ಸ್ವಚ್ಛಗೊಳಿಸುವಂತೆ ಆಗ್ರಹಿಸಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್ ಮಾತನಾಡಿ, ಹಳೇ ಬಸ್‌ನಿಲ್ದಾಣವನ್ನು ನವೀಕರಿಸಲು ಸಾರಿಗೆ ಅಧಿಕಾರಿಗಳು ಸಮೀಕ್ಷೆ ಮಾಡಿದ್ದು, 2 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲಿಯೇ ನವೀಕರಣ ಕಾಮಗಾರಿ ಆರಂಭಿಸಲಾಗುವುದು. ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪದಾಧಿಕಾರಿಗಳಾದ ಕೆ.ದೊಡ್ಡಬಸಪ್ಪ, ಜೆ.ಶಿವಕುಮಾರ್, ಎಸ್.ಗೋಪಾಲ್, ಎಂ.ಶಶಿಕುಮಾರ್, ಕವಿತಾ, ಹುಲಿಗೆಮ್ಮ, ಗಂಗಮ್ಮ, ರೇಣುಕಮ್ಮ, ಚಂದ್ರಮ್ಮ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net