ಅಂಚೆ ಕಚೇರಿಯಲ್ಲಿ ರ‌್ಯಾಂಪ್ ನಿರ್ಮಿಸಿ

Mdl bike
ಮುದಗಲ್‌ನಲ್ಲಿ ಉಪ ಅಂಚೆ ಪಾಲಕ ಬಸವರಾಜಗೆ ಅಂಗವಿಕಲರ ಆರ್‌ಪಿಡಿ ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ರಾಜ್ಯಾಧ್ಯಕ್ಷ ಸುರೇಶ ಭಂಡಾರಿ, ಅಜಮಲ್ ಅಹಮದ್, ರಹಿಮಾನ್‌ವುಲ್ಲಾ, ಹುಸೇನ್ ಬಾಷಾ ಬನ್ನಿಗೋಳ ಇತರರಿದ್ದರು.
Published on

ಮುದಗಲ್: ಪಟ್ಟಣದ ಅಂಚೆ ಕಚೇರಿಯಲ್ಲಿ ಅಂಗವಿಕರಿಗಾಗಿ ರ‌್ಯಾಂಪ್ ಸೇರಿ ಇತರ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಅಂಗವಿಕಲರ ಆರ್‌ಪಿಡಿ ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಶನಿವಾರ ಉಪ ಅಂಚೆ ಪಾಲಕ ಬಸವರಾಜಗೆ ಮನವಿ ಸಲ್ಲಿಸಿತು.

ಸಂಘದ ರಾಜ್ಯಾಧ್ಯಕ್ಷ ಸುರೇಶ ಭಂಡಾರಿ ಮಾತನಾಡಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2018ರ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮತ್ತು ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಬೇಕು.

ಇಲ್ಲಿನ ಅಂಚೆ ಕಚೇರಿಯಲ್ಲಿ ಸುಲಭ ವ್ಯವಸ್ಥೆಯ ರ‌್ಯಾಂಪ್ ಇಲ್ಲದ ಕಾರಣ ಮಾಸಾಶನ ಸೇರಿ ಇತರ ಕೆಲಸಗಳಿಗೆ ಬರಲು ಅಂಗವಿಕಲರು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಅಂಗವಿಕಲರ ಕಾಯ್ದೆ ಉಲ್ಲಂಘನೆಯಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಅಂಚೆ ಕಚೇರಿಗೆ ವೈಜ್ಞಾನಿಕವಾದ ರೈಲಿಂಗ್ ಸಹಿತ ರ‌್ಯಾಂಪ್, ವ್ಹೀಲ್ ಚೇರ್ ಸೇರಿದಂತೆ ಎಲ್ಲ ರೀತಿಯ ಸುಲಭ ಲಭ್ಯತೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net