ಮಳೆನೀರು ಚರಂಡಿ ನಿರ್ಮಿಸಿ ಸುರಕ್ಷಿತ ರಸ್ತೆ ನಿರ್ಮಿಸಿ: ಎಸ್.ಎ. ರಾಮದಾಸ್ ಸೂಚನೆ

ramadas
Published on

ಮೈಸೂರು: ಶಾಸಕ ಎಸ್.ಎ. ರಾಮದಾಸ್ ಭಾನುವಾರ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮುಖ್ಯವಾಗಿ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 53 ಸಿದ್ಧಾರ್ಥನಗರ ಭಾಗದ 2.50 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬನ್ನೂರು ಮುಖ್ಯರಸ್ತೆಯಿಂದ ಗೀತಾ ಶಾಲೆ ಮಾರ್ಗವಾಗಿ ನೀತಿಮಾರ್ಗ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಸದರಿ ಮುಖ್ಯ ರಸ್ತೆಯಲ್ಲಿ ಚರಂಡಿ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ನಿಂತು ರಸ್ತೆ ಹಾಳಾಗುತ್ತಿರುವುದನ್ನು ಗಮನಿಸಿದ ಶಾಸಕರು, ಮಳೆನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ನೋಡಿಕೊಳ್ಳಬೇಕು. ಸಮಸ್ಯೆ ಇರುವ ಕಡೆ ಮಳೆನೀರು ಚರಂಡಿ ನಿರ್ಮಿಸಿ ಸುರಕ್ಷಿತ ರಸ್ತೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.


ಬಳಿಕ ಸಂಗೀತಾ ಕಾರ್ನರ್‌ನಿಂದ ಡೇರಿ ಕ್ವಾಟ್ರರ್ಸ್ ಮಾರ್ಗವಾಗಿ ಬನ್ನೂರು ರಸ್ತೆವರೆಗಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಸದರಿ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಫುಟ್ಪಾತ್ ಜೋಡಣೆ ಮಾಡಿ ಕಾಮಗಾರಿಯನ್ನು ತ್ವರಿತ ಹಾಗೂ ಕಾಮಗಾರಿಯ ಮಾಹಿತಿಯನ್ನು ಪಾರದರ್ಶಕ ರೀತಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಇಂದಿರಾ ಕ್ಯಾಂಟೀನ್ ವೃತ್ತದಿಂದ ಟೆರೆಷಿಯನ್ ವೃತ್ತದವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಸದರಿ ರಸ್ತೆಯು ಸದಾಕಾಲ ವಾಹನ ದಟ್ಟನೆಯಿಂದ ಕೂಡಿದ್ದು, ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆಯನ್ನು ಸಂಚಾರ ನಿಯಮಾನುಸಾರವಾಗಿ ವೈಟ್‌ಲೈನ್ ಮತ್ತು ರಿಫ್ಲೆಕ್ಟರ್‌ಗಳನ್ನು ಅಳವಡಿಸುವಂತೆ ಸೂಚಿಸಿದರು.
ನಗರಪಾಲಿಕೆ ಸದಸ್ಯೆ ರೂಪಾ ಯೋಗೇಶ್, ಮುಖಂಡರಾದ ವಿನಯ್, ಯೋಗೀಶ್‌ಬಾಬು, ಸೋಮು ಚಿನ್ನ, ಚಿದಂಬರ್, ಮೊಟಪ್ಪ, ರಂಗನಾಥ್, ಮಹದೇವಸ್ವಾಮಿ, ಪಟೇಲ, ಕೇಬಲ್ ಕೃಷ್ಣ, ಸಾಗರ್, ಭಾರತಿ, ನಾಗರಾಜ್, ಸುರೇಶ್‌ಗೌಡ, ಮಹೇಶ್, ದೇವಯ್ಯ, ಸಿದ್ದಯ್ಯ, ಮಹದೇವಣ್ಣ, ಅರ್ಜುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net