ಮೈಸೂರು ಮಾದರಿಯಲ್ಲಿ ಮೇಘಾಲಯ ನವನಗರ ನಿರ್ಮಿಸಿ : ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಸಲಹೆ

mysore
Published on

ಮೈಸೂರು: ಯದುವಂಶದ ಮಹಾರಾಜರು ಮೈಸೂರು ನಗರವನ್ನು ನಿರ್ಮಾಣ ಮಾಡಿದ ರೀತಿಯಲ್ಲಿ ಮೇಘಾಲಯದಲ್ಲಿ ನವನಗರ ನಿರ್ಮಾಣ ಮಾಡಬೇಕು ಎಂದು ಮೇಘಾಲಯದ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೇಳಿದರು.

ಅಲ್‌ಜೈಮರ್ ಸೋಸೈಟಿ ಆ್ ಇಂಡಿಯಾ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಬುದ್ಧಿವಾಂದ್ಯ ಸ್ನೇಹಿ ಮೈಸೂರು’ ಕಾಂರ್ುಕ್ರಮ ಉದ್ಘಾಟಿಸಿ ಮಾತನಾಡಿ, ಮೇಘಾಲಂುದಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನವನಗರ ನಿರ್ಮಾಣ ಮಾಡಲಾಗುತ್ತಿದ್ದು, ಈ ನವನಗರ ಮೈಸೂರು ಮಾದರಿಯಲ್ಲಿ ನಿರ್ಮಾಣ ಮಾಡುವಂತೆ ಸಲಹೆ ನೀಡಿದ್ದೇನೆ ಎಂದರು.

ಮೇಘಾಲಂು ಒಂದು ಅತ್ಯತ್ತಮ ಪ್ರವಾಸಿ ತಾಣವಾಗಿದ್ದು, ಮೈಸೂರಿಗರು ಇನ್ನು ಮುಂದೆ ಮೆಘಾಲಂು ನಮ್ಮದು ಎಂಬ ಭಾವನೆಯೊಂದಿಗೆ ಬಂದು ಅಲ್ಲಿನ ಸೌಂದಂರ್ುವನ್ನು ಆಸ್ವಾದಿಸಿ. ಪ್ರವಾಸೋದ್ಯಮ ವಿಚಾರದಲ್ಲಿ ಮೈಸೂರು ಮುಂದೆ ಇದೆ. ಮೇಘಾಲಯದಲ್ಲೂ ಸಾಕಷ್ಟು ಪ್ರವಾಸಿ ತಾಣಗಳು ಇದ್ದು, ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳು ಇವೆ ಎಂದು ಹೇಳಿದರು.

ಮೇಘಾಲಂು ಮಹಿಳಾ ಪ್ರಾಬಲ್ಯ ಹೊಂದಿರುವ ರಾಜ್ಯವಾಗಿದ್ದು, ವಿವಾಹದ ನಂತರ ಪತಿ ಪತ್ನಿಯ ಮನೆಗೆ ತೆರಳುವ ಸಂಪ್ರದಾಯ ಇದೆ. ಆಸ್ತಿಯ ಹಕ್ಕನ್ನು ಸಹ ಮಹಿಳೆಯರಿಗೆ ನೀಡಲಾಗಿದ್ದು, ಮನೆಂು ಕಿರಿಂು ಮಗಳಿಗೆ ಆಸ್ತಿಂು ಹಕ್ಕು ನೀಡಲಾಗುತ್ತದೆ ಎಂದು ಹೇಳಿದರು.

‘ನೀವು ರಾಜಭವನಕ್ಕೆ ಮೀಸಲಾಗಬೇಡಿ, ರಾಜಭವನ ಬಿಟ್ಟು ಹೊರಬಂದು ಜನರ ರಾಜ್ಯಪಾಲರಾಗಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದಿನದ 18 ಗಂಟೆ ಕೆಲಸ ವಾಡುತ್ತಾರೆ. ಹೀಗಾಗಿ ಅವರ ವಾರ್ಗದರ್ಶನ ಪ್ರಕಾರ ನಾವು ಕನಿಷ್ಠ 8 ರಿಂದ 9 ಗಂಟೆಯಾದರೂ ಕೆಲಸ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net