ಶಿಸ್ತಿನೊಂದಿಗೆ ಮೌಲ್ಯಯುತ ಜೀವನ ಕಟ್ಟಿಕೊಳ್ಳಿ

Build a valuable life with discipline
Build a valuable life with discipline
Published on

ತುಬಚಿ: ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಡಿವೈಎಸ್ಪಿ ಶಾಂತವೀರ ಈ. ಹೇಳಿದರು.

ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಮಾದರಿ ಶಾಲೆಯ ನಲಿ-ಕಲಿ ವಿದ್ಯಾರ್ಥಿಗಳಿಗೆ ಕುರ್ಚಿ-ಟೇಬಲ್ ಕಾಣಿಕೆ ನೀಡಿ ಮಾತನಾಡಿದರು.

ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ಮೌಲ್ಯಯುತ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ತಹಸೀಲ್ದಾರ್ ಸಂಜು ಕುಮಾರ ದಾಸರ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸು ಕಾಣಲು ಕಠಿಣ ಪರಿಶ್ರಮ ಹಾಗೂ ಸತತ ಅಧ್ಯಯನ ಬಹಳ ಮುಖ್ಯ. ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದರು ಸಲಹೆ ನೀಡಿದರು.

ಡಿವೈಎಸ್ಪಿ ಶಾಂತವೀರ ಈ. ಹಾಗೂ ಸಿಂದಗಿ ತಾಲೂಕಿನ ತಹಸೀಲ್ದಾರ್ ಸಂಜು ಕುಮಾರ್ ದಾಸರ ಸೇರಿ 70 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ದಾನವಾಗಿ ನೀಡಿದರು.

ಶ್ರೀವಾಣಿ ಶಾಂತವೀರ ಈ., ಗುರುಪಾದ ಕುಂಚನೂರ, ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ ಕಂಕನವಾಡಿ, ಈಶ್ವರ ಕಲ್ಲೋಳಿ, ಸಂಗಪ್ಪ ಕಣಬೂರ, ಬಾವು ನಾವಿ, ನರಸಿಂಹ ಪಾಟೀಲ, ಶೇಖರ ಪಾಟೀಲ, ನರಸಿಂಹ ಹಂಡೆನವರ, ಗುರುಲಿಂಗ ಕೊಕ್ಕನವರ, ಬಸವರಾಜ ಕಟಗೇರಿ, ಅಣ್ಣು ಗೌಡ ಪಾಟೀಲ್, ರಾಜು ಹೊಸೂರು, ಸದಾಶಿವ್ ಕೋಕ್ಕನವರ ಇದ್ದರು.

ಎಸ್.ಐ. ಲೋನಿ ಸ್ವಾಗತಿಸಿದರು. ಬಿ.ಎನ್.ಜಮಖಂಡಿ ನಿರೂಪಿಸಿದರು. ಎಚ್.ಎಂ.ಉಸ್ತಾದ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net