

ಕಮತಗಿ: ಸಮೀಪದ ಮಗನೂರ ಗ್ರಾಮದಲ್ಲಿ ಆರಂಭಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆ ನಿರ್ಮಿಸಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾಪಂ ಪಿಡಿಒ ಪಿ.ಬಿ. ಮುಳ್ಳೂರ ಅವರಿಗೆ ಮನವಿ ಸಲ್ಲಿಸಿದರು.
ಸ್ಮಶಾನಕ್ಕೆ ಹೊಂದಿಕೊಂಡು ಗ್ರಾಮ ಪಂಚಾಯಿತಿ ವತಿಯಿಂದ ಘನತ್ಯಾಜ್ಯ ಘಟಕ ಆರಂಭಿಸುತ್ತಿದ್ದು, ಇದಕ್ಕೆ ಹೊಂದಿಕೊಂಡೇ ಜನವಸತಿ ಪ್ರದೇಶವಿದೆ. ಇದರಿಂದ ತೀವ್ರ ತೊಂದರೆ ಆಗುತ್ತದೆ. ಆದ್ದರಿಂದ ಬೇರೆಡೆ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಬೇಕಾದರೆ ಸ್ಥಳೀಯರ ಅಭಿಪ್ರಾಯವನ್ನೂ ಪಡೆದಿಲ್ಲ. ಸ್ಮಶಾನದ ಕೂಗಳತೆಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಹೀಗಾಗಿ ದುರ್ವಾಸನೆ, ಸೊಳ್ಳೆಗಳಿಂದಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಿಕೆಪಿಎಸ್ ಸದಸ್ಯ ರವಿಕುಮಾರ ಮನ್ನಿಕೇರಿ ತಿಳಿಸಿದ್ದಾರೆ.
ಗ್ರಾಮ ಸದಸ್ಯರಾದ ಶಂಕ್ರವ್ವ ಗಾಣಿಗೇರ, ಐ.ಎಸ್. ಹಿರೇಮಠ, ಲಕ್ಷ್ಮವ್ವ ಮುಗನೂರ, ಗ್ರಾಮದ ಪ್ರಮುಖರಾದ ಶ್ರೀಶೈಲ ಗಾಣಿಗೇರ, ರವಿಕುಮಾರ ಮನ್ನಿಕೇರಿ, ಗೂಳಪ್ಪ ಓಗಿ, ಮುತ್ತುರಾಮ ಮುಗನೂರ, ಈರಯ್ಯ ಹಿರೇಮಠ, ಬಸವರಾಜ ಹರದೊಳ್ಳಿ ಯಮನಪ್ಪ ಗಂಗೂರ, ಚಂದ್ರಶೇಖರ ಮುಗನೂರ, ರಾಮನಗೌಡ ಗೌಡರ, ಯಲ್ಲಪ್ಪ ಗುರಿಕಾರ ಮತ್ತಿತರರಿದ್ದರು.