ಗುಣಮಟ್ಟದ ಮಳಿಗೆ ನಿರ್ಮಿಸಿ

Build a quality store
ಮಹಾಲಿಂಗಪುರ ಎಪಿಎಂಸಿ ಜಾಗದಲ್ಲಿ 11 ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಸಿದ್ದು ಸವದಿ ಶಂಕುಸ್ಥಾಪನೆ ನೆರವೇರಿಸಿದರು. ಮಹಾಂತೇಶ ಹಿಟ್ಟಿನಮಠ, ಸುರೇಶ ಅಕ್ಕಿವಾಟ, ಮಹಾಲಿಂಗಪ್ಪ ಕುಳ್ಳೋಳ್ಳಿ, ಶಂಕರಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಮನೋಹರ ಶಿರೋಳ, ಜಿ.ಎಸ್. ಗೊಂಬಿ, ಚನಬಸು ಯರಗಟ್ಟಿ, ಶಿವಾನಂದ ಅಂಗಡಿ, ಚೆನ್ನಪ್ಪ ಪಟ್ಟಣಶೆಟ್ಟಿ, ವೀರೇಶ ಮುಂಡಗನೂರ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ಕೃಷಿ ಮಾರುಕಟ್ಟೆ ಸಮಿತಿಗೆ ಆದಾಯ ಹೆಚ್ಚಿಸುವುದರ ಜತೆಗೆ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಜತ್ತ ಜಾಂಬೋಟಿ ಹೆದ್ದಾರಿ ಪಕ್ಕದಲ್ಲಿ ಚಿಕ್ಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಎಪಿಎಂಸಿ ಜಾಗದಲ್ಲಿ ಅಂದಾಜು 79 ಲಕ್ಷ ರೂ. ವೆಚ್ಚದಲ್ಲ್ಲಿ 11 ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಮಳಿಗೆಗಳನ್ನು ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಿಜೆಪಿ ಮುಖಂಡರಾದ ಸುರೇಶ ಅಕ್ಕಿವಾಟ, ಮಹಾಲಿಂಗಪ್ಪ ಕುಳ್ಳೋಳ್ಳಿ, ಶಂಕರಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಮನೋಹರ ಶಿರೋಳ, ಜಿ.ಎಸ್. ಗೊಂಬಿ, ಚನಬಸು ಯರಗಟ್ಟಿ, ಶಿವಾನಂದ ಅಂಗಡಿ, ಚೆನ್ನಪ್ಪ ಪಟ್ಟಣಶೆಟ್ಟಿ, ವಿರೇಶ ಮುಂಡಗನೂರ, ಶ್ರೀಶೈಲ ನುಚ್ಚಿ, ಬಾಳಕೃಷ್ಣಾ ಮಾಳವದೆ, ಮಹಾಲಿಂಗಪ್ಪ ಕಂಠಿ, ಮಹೇಶ್ ಜಿಡ್ಡಿಮನಿ, ಚಂದ್ರಶೇಖರ ಗೊಂದಿ, ಬಸು ಹುಕ್ಕೇರಿ, ಮಹೇಶ್ ಮುಕುಂದ, ಎಪಿಎಂಸಿ ಕಾರ್ಯದರ್ಶಿ ಎಲ್.ಎಂ. ಉದ್ದಪ್ಪನ್ನವರ, ಬಿ.ಪಿ. ಬಾಡಗಿ, ಡಿ.ಬಿ. ಬಸಗೌಡರ, ಆರ್.ಎಚ್. ರಾಠೋಡ್, ಪ್ರದಸ ಎ.ಎಲ್. ಕಾಂಬಳೆ, ಮಾರುಕಟ್ಟೆ ಮೇಲ್ವಿಚಾರಕ ಬಿ.ಎನ್. ಕುಂಬಾರ, ಕುಡಚಿ ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಆರ್.ಎಚ್. ಭೋಜನ್ನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net