ಗುಣಮಟ್ಟದ ಮನೆ ಕಟ್ಟಿಸಿಕೊಳ್ಳಲಿ

7..2
ನಂದಿಕುರಳಿ ಗ್ರಾಮದಲ್ಲಿ ಸರ್ಕಾರಿ ಮನೆಗಳ ಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಶಾಸಕ ಡಿ.ಎಂ.ಐಹೊಳೆ, ಅಮಿತ ಜಾಧವ, ಬಾಳು ಕರೋಲೆ, ಗಣಪತಿ ಮಾಳಿ, ಕಷ್ಣಪ್ಪ ದತ್ತವಾಡೆ ಇತರರಿದ್ದರು.
Published on

ರಾಯಬಾಗ: ಮನೆ ಕಟ್ಟಡ ಲಾನುಭವಿಗಳು ಸರ್ಕಾರದ ಹಣದೊಂದಿಗೆ ತಾವೂ ಹಣ ಹಾಕಿ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ತಾಲೂಕಿನ ನಂದಿಕುರಳಿ ಗ್ರಾಮದ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಬಸವ ವಸತಿ ಹಾಗೂ ಅಂಬೇಡ್ಕರ್ ಆವಾಸ ಯೋಜನೆಯಡಿ ಸೋಮವಾರ 108 ಲಾನುಭವಿಗಳಿಗೆ ಮನೆ ಕಟ್ಟಡ ಆದೇಶ ಪತ್ರ ವಿತರಿಸಿ ಮಾತನಾಡಿದರು. ಇಡೀ ತಾಲೂಕಿನಲ್ಲಿ ನಂದಿಕುರಳಿ ಗ್ರಾಮಕ್ಕೆ ಮಾತ್ರ ಮನೆಗಳು ಮಂಜೂರಾಗಿವೆ. ಲಾನುಭವಿಗಳು ಶೌಚಗೃಹ ಕಟ್ಟಿಸಿಕೊಂಡು ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.

ಗ್ರಾಪಂ ಪಿಡಿಒ ಎ.ಎ.ದಿಲಾವರ್, ಉಪಾಧ್ಯಕ್ಷ ಅಮಿತ ಜಾಧವ, ಸಿದ್ದಲಿಂಗ ಹಿರೇಕುರಬರ, ಬಾಳು ಕರೋಲೆ, ಗಣಪತಿ ಮಾಳಿ, ಕೃಷ್ಣಪ್ಪ ದತ್ತವಾಡೆ, ಅಣ್ಣಪ್ಪ ಸೂರ್ಯವಂಶಿ, ಪ್ರಧಾನಿ ಉಪ್ಪಾರ, ಬನ್ನಪ್ಪ ಹಿರೇಕುರಬರ, ದಸ್ತಗೀರ ಮುಲ್ಲಾ, ಸುರೇಶ ಉಮ್ರಾಣಿ, ಮಾರುತಿ ಗಡ್ಕರಿ, ನಿಂಗಪ್ಪ ಬಾನಕರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net