ಗುಣಮಟ್ಟದ ಕಟ್ಟಡ ನಿರ್ಮಿಸಿ

Build a quality building
ಇಳಕಲ್ಲದ ಸರ್ಕಾರಿ ಪಪೂ ಕಾಲೇಜಿನ ಮ್ಯಾಗೇರಿ ಲೇಔಟ್‌ದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಮುಖಂಡ ಶರಣಪ್ಪ ಆಮದಿಹಾಳ ಇದ್ದರು.
Published on

ಇಳಕಲ್ಲ (ಗ್ರಾ): ನಗರದ ಸುತ್ತಲಿನ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 6.50 ಕೋಟಿ ರೂ. ವೆಚ್ಚದ ಈ ವಸತಿ ನಿಲಯ ಆರಂಭಿಸಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ಸರ್ಕಾರಿ ಸರ್ಕಾರಿ ಪಪೂ ಕಾಲೇಜಿನ ಬಳಿಯ ಮ್ಯಾಗೇರಿ ಲೇಔಟ್‌ದಲ್ಲಿ ಲೋಕೋಪಯೋಗಿ ಇಲಾಖೆಯ 2022- 23 ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗುತ್ತಿಗೆದಾರರು ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ನಗರದಲ್ಲಿ ಸಿಸಿ ರಸ್ತೆ, 24*7 ಕುಡಿಯುವ ನೀರು ಯೋಜನೆ, ಒಳಚರಂಡಿ ಕಾಮಗಾರಿ ಸೇರಿ ಎಲ್ಲ ಅಭಿವೃದ್ಧಿ ಕಾರ್ಯಗಳು ನನ್ನ ಅಧಿಕಾರಾವಧಿಯಲ್ಲೇ ಆಗಿವೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಮೌಲೇಶ ಬಂಡಿವಡ್ಡರ, ನಾಮನಿರ್ದೇಶಿತ ಸದಸ್ಯ ಮಲ್ಲು ಮಡಿವಾಳರ, ಮುಖಂಡರಾದ ಶರಣಪ್ಪ ಆಮದಿಹಾಳ, ಶಬ್ಬೀರ ಬಾಗವಾನ, ಗುತ್ತಿಗೆದಾರ ಶಂಕರಗೌಡ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net