ಪಾಲಿಕೆ ಬಜಾರ್ ನಿರ್ಮಿಸಿ : ಮೈಸೂರು ಕೈಗಾರಿಕೆಗಳ ಸಂಘ ಒತ್ತಾಯ

Suresh kumar jain
Published on

ಮೈಸೂರು: ದೆಹಲಿ ಮಾದರಿಯಲ್ಲಿ ಮೈಸೂರಿನಲ್ಲಿ ಪಾಲಿಕೆ ಬಜಾರ್ ನಿರ್ಮಾಣ ಮಾಡಬೇಕು ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಆಗ್ರಹಿಸಿದರು.

ನಗರ ಪಾಲಿಕೆ ಬಜೆಟ್ ಕುರಿತು ಮಾಜಿ ಮೇಯರ್, ಉಪ ಮೇಯರ್‌ಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ದೆಹಲಿಯಲ್ಲಿ ಪಾಲಿಕೆ ಬಜಾರ್ ಇದ್ದು, ಅಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ನಗರದಲ್ಲಿ ಪಾಲಿಕೆ ಬಜಾರ್ ನಿರ್ಮಿಸಬೇಕು ಅಥವಾ ದೇವರಾಜ ಮಾರುಕಟ್ಟೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬೇಕು. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ.80 ಅನುದಾನ ದೊರೆಯಲಿದೆ ಎಂದು

ಕೈಗಾರಿಕಾ ಬಡಾವಣೆಗಳ ಅಭಿವೃದ್ಧಿಗೆ ಪಾಲಿಕೆ ಕ್ರಮ ವಹಿಸಬೇಕು. ಸರ್ಕಾರ ಬಳಿ ಕೈಗಾರಿಕಾ ಅಭಿವೃದ್ಧಿ ನಿಧಿ ಇದ್ದು, ಈ ನಿಧಿ ಹಾಗೂ ಪಾಲಿಕೆ ನಿಧಿಯನ್ನು ಬಳಸಿಕೊಂಡು ಕೈಗಾರಿಕಾ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net