ಮೊಬೈಲ್ ಟವರ್ ನಿರ್ಮಿಸಿ

3Thyagarthi (1)
ರಾಷ್ಟ್ರೀಕೃತ ಬ್ಯಾಂಕ್ ಮಂಜೂರು ಮಾಡಬೇಕೆಂದು ಒತ್ತಾಯಿಸಿ ತ್ಯಾಗರ್ತಿ ಭಾಗದ ಮುಖಂಡರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಮುತ್ತು ಗೌಡ, ಹಮೀದ್ ಖಾನ್, ಕೃಷ್ಣಮೂರ್ತಿ ಹೊಸಂತೆ, ಯೋಗೇಶ್ ಕುಮಾರ್ ತ್ಯಾಗರ್ತಿ ಇತರರಿದ್ದರು.
Published on

ತ್ಯಾಗರ್ತಿ: ಇಲ್ಲಿನ 50ಕ್ಕೂ ಹೆಚ್ಚು ಹಳ್ಳಿಗಳಿಗೆ ವ್ಯಾವಹಾರಿಕವಾಗಿ ತ್ಯಾಗರ್ತಿ ಕೇಂದ್ರ ಸ್ಥಾನವಾಗಿದ್ದು, ಸುತ್ತಮುತ್ತಲಿನ ಜನರಿಗೆ ಬ್ಯಾಂಕ್ ವ್ಯವಹಾರ ನಡೆಸಲು ರಾಷ್ಟ್ರೀಯ ಬ್ಯಾಂಕ್ ಅವಶ್ಯಕತೆ ಇದೆ. ಹಾಗಾಗಿ ಕೇಂದ್ರಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಮಂಜೂರು ಮಾಡಬೇಕು ಎಂದು ತ್ಯಾಗರ್ತಿ ಗ್ರಾಪಂ ವ್ಯಾಪ್ತಿಯ ಮುಖಂಡರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಸಂಸದರನ್ನು ಭೇಟಿ ಮಾಡಿದ ಮುಖಂಡರು, ಹಿರೇಬಿಲಗುಂಜಿ, ಬರೂರು, ತ್ಯಾಗರ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಹಳ್ಳಿಗಳಿವೆ. ಈ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸೌಲಭ್ಯದ ಕೊರತೆ ಇರುವಲ್ಲಿ ಮೊಬೈಲ್ ಟವರ್ ಮಂಜೂರು ಮಾಡಿಸಿ ಎಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಂಸದ ಬಿ.ವೈ.ರಾಘವೇಂದ್ರ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್‌ನಲ್ಲಿ ಸೂಚನೆ ನೀಡಿದರು. ಪ್ರಮುಖರಾದ ಮುತ್ತು ಗೌಡ ವೀರಾಪುರ, ತ್ಯಾಗರ್ತಿ ಗ್ರಾಪಂ ಮಾಜಿ ಅಧ್ಯಕ್ಷ ಹಮೀದ್ ಖಾನ್, ಹಿರೇಬಿಲಗುಂಜಿ ಗ್ರಾ ಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಹೊಸಂತೆ, ಯೋಗೇಶ್ ಕುಮಾರ್ ತ್ಯಾಗರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net