ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಿ

2
Published on

ಎಲೆ ರಾಂಪುರದ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಸಲಹೆ

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಬೀದಿ ಪಾಲಾಗುತ್ತಿದ್ದ ಸಾವಿರಾರು ಮಂದಿಯನ್ನು ಮದ್ಯವರ್ಜನ ಶಿಬಿರದಿಂದ ಮತ್ತೆ ಬದುಕು ಕಟ್ಟಿಕೊಳ್ಳುವಂತೆ ಮಾಡಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾನಿಯ ಎಂದು ಎಲೆ ರಾಂಪುರದ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.


ಪಟ್ಟಣದ ಕುಂಚಿಟಿಗ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಗಾಂಧಿ ಸ್ಮ$ತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಲ್ಲ ವರ್ಗದ ಜನರ ಜನರ ಚಿಂತನೆ ನಡೆಸುವ ಸಂಸ್ಥೆಯಾಗಿದೆ. ಗ್ರಾಮೀಣ ಭಾಗದ ಜನರ ನಂಬಿಕೆಯ ಮೇಲೆ ಬದುಕು ಕಟ್ಟಿಕೊಡುವ ಸಂಸ್ಥೆ ಎಂದರು.
ಹೆಣ್ಣು ಮಕ್ಕಳಿಗೂ ಮದ್ಯವರ್ಜನ ಶಿಬಿರ ನಡೆಸುವಂತೆ ಒತ್ತಾಯಿಸುವುದಾಗಿ ತಿಳಿಸಿದ ಅವರು, ಸಿಯರಲ್ಲಿ ಬದಲಾವಣೆ ಕಂಡು ಬಂದಾಗ ಸಾಮಾಜಿಕ ಬದಲಾವಣೆಯಾಗುತ್ತದೆ. ಪ್ರತಿಯೊಬ್ಬರು ಧಾರ್ಮಿಕ ಆಚರಣೆ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು. ಎಲೆ ರಾಮಪುರದ ಕುಂಚೆಟಿಗ ಮಠ ಅನಾಥ ಮಕ್ಕಳು ಮತ್ತು ಬಡವರಿಗೆ ಉಚಿತವಾಗಿ ಶಿಣ ನೀಡುತ್ತಿದ್ದು, ಕಡುಬಡವರು ಮತ್ತು ಅನಾಥ ಮಕ್ಕಳು ನಮ್ಮ ಮಠದಲ್ಲಿ ಉಚಿತ ಶಿಣ ಪಡೆಯಲು ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದರು.


ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯ ಮುರುಳಿಧರ ಹಾಲಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾದರಿ ಸಂಸ್ಥೆಯಾಗಿದೆ. ಸ್ವಂತ ಕಾಲ ಮೇಲೆ ನಿಲ್ಲಲು ಪ್ರೇರಣೆ ನೀಡಿದ ಮತ್ತು ಸಾಮಾನ್ಯ ಜನರನ್ನು ಸರಿದಾರಿಗೆ ತರಲು ಒತ್ತಾಸೆ ನೀಡಿದ ಸಂಸ್ಥೆ ಎಂದು ಬಣ್ಣಿಸಿದರು.


ಪುರಸಭೆ ಅಧ್ಯ ಲಾಲಾಪೇಟೆ ಮಂಜುನಾಥ್​ ಮಾತನಾಡಿ, ಗಾಂಧಿ ತತ್ವಗಳು ಗಾಂಧಿ ಜಯಂತಿಗೆ ಮಾತ್ರ ಸೀಮಿತವಾಗಿದ್ದು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗಾಂಧಿ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಹೆಚ್ಚುವರಿ ಪೊಲೀಸ್​ ಅಧೀಕ ಅಬ್ದುಲ್​ ಖಾದರ್​, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯ ಎಸ್​.ಕೆ.ರಾಮಚಂದ್ರಗುಪ್ತ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಯೋಜನಾ ನಿರ್ದೇಶಕ ದಿನೇಶ್​, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ್​ ಮೂರ್ತಿ, ಕುಂಚಿಟಿಗ ಒಕ್ಕಲಿಗರ ಸಂದ ಅಧ್ಯ ಪಿ.ಎನ್​.ರಾಜಶೇಖರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net