

ಕಾರವಾರ: ಕಾಡು ಹಂದಿಗಳನ್ನು ಹೊಡೆಯಲು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಗುಲಿ 5 ಎಮ್ಮೆ ಹಾಗೂ 2 ಕೋಣಗಳು ಮೃತಪಟ್ಟ ಘಟನೆ ಮಂಗಳವಾರ ಕಿನ್ನರ ಗ್ರಾಮದ ಜಡಕಿ ಎಂಬಲ್ಲಿ ನಡೆದಿದೆ.
ಸುರೇಖಾ ಸುರೇಶ ಪೆಡ್ನೇಕರ್ ಎಂಬುವವರಿಗೆ ಸೇರಿದ 5 ಎಮ್ಮೆಗಳು ಹಾಗೂ ಶಕುಂತಲಾ ಪೆಡ್ನೇಕರ್ ಅವರಿಗೆ ಸೇರಿದ 2 ಕೋಣಗಳು ಸೋಮವಾರ ರಾತ್ರಿ ಬಲಿಯಾಗಿದ್ದರು, ಮಂಗಳವಾರ ಬೆಳಕಿಗೆ ಬಂದಿದೆ. ಹಂದಿಗಳನ್ನು ಹಿಡಿಯಲು ವಿದ್ಯುತ್ ತಂತಿ ಅಳವಡಿಸುತ್ತಿದ್ದ ವಿದ್ಯಾಧರ ನಾಗೇಕರ್ ಎಂಬಾತನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದ್ದೆಗಳಲ್ಲಿ ಸತ್ತು ಬಿದ್ದ ಎಮ್ಮೆಗಳನ್ನು ತೆರವು ಮಾಡಲು ಮಾಲೀಕರ ಬಳಿ ಹಣವಿರಲಿಲ್ಲ. ಇದರಿಂದ ಸಾಕಷ್ಟು ಹೋರಾಟದ ಬಳಿಕ ಗ್ರಾಪಂ ಎಮ್ಮೆಗಳ ಕಳೆಬರ ವಿಲೇವಾರಿ ಮಾಡಲು 5 ಸಾವಿರ ರೂ. ನೀಡಿದೆ.