ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ 'ನಾಗು' ಕೋಣ ಹೃದಯಾಘಾತದಿಂದ ಸಾವು

buffalo nagu which succumbed to heart attack during kambala
Published on

ಮಣಿಪಾಲ:  ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಕಂಬಳ ಕ್ಷೇತ್ರದಲ್ಲಿ ಸಾದನೆಗೈದ ' ನಾಗು' ಎನ್ನುವ ಕೋಣ ಹೃದಯಾಘಾತದಿಂದಾಗಿ ಶನಿವಾರ ವಿಧಿವಶವಾಗಿದೆ.

ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಎಂದೇ ಹೆಸರಾದ 'ಲಕ್ಕಿ' ಯು ಒಂದು ವಾರದ ಹಿಂದಷ್ಟೇ ಕಂಬಳಾಭಿಮಾನಿಗಳನ್ನು ಅಗಲಿದೆ, ಇದರ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಸಾದನೆಗೈದ ' ನಾಗು' ಎನ್ನುವ ಕೋಣ ಶನಿವಾರ ವಿಧಿವಶವಾಗಿದೆ.

ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿದ್ದ ನಾಗು ಎಂಬ ಕೋಣವು ಹೃದಯಾಘಾತದಿಂದಾಗಿ ಶನಿವಾರ ಅಸುನೀಗಿದೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಹಲಗೆ ಸೀನಿಯರ್ ವಿಭಾಗಕ್ಕೆ ಸೇರಿದ ನಾಗು ತನ್ನ ಸಾಹಸದಿಂದ ಹಲವಾರು ಕಂಬಳಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ಮೊದಲು ಬೈಂದೂರಿನಿಂದ ಬಂಢಾರಮನೆ ಸೇರಿದ ನಾಗು, ನಂತರ ಉಡುಪಿ ಚಿತ್ತಾಡಿ ಅಪ್ಪು ಶೆಟ್ಟಿಯವರ ಮನೆಗೆ ಸೇರಿದ. ಬಳಿಕ ಜಪ್ಪು ಮಂಕುತೋಟ ಅನಿಲ್ ಶೆಟ್ಟಿಯವರು ಎರಡು ವರ್ಷದ ಹಿಂದೆಯಷ್ಟೇ ನಾಗು ಕೋಣವನ್ನು ಖರೀದಿ ಮಾಡಿ ಸಾಕುತ್ತಿದ್ದರು.
ಹೀಗಾಗಿ ಕಂಬಳ ಕ್ಷೇತ್ರದಲ್ಲಿ ಹೆಸರು ಮಾಡಿರುವಂತಹ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಅಭಿಮಾನಿಗಳು ಹಾಗೂ ಕಂಬಳ ಕ್ಷೇತ್ರವು ಕಳೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net