ವಿದ್ಯುತ್ ಸ್ಪರ್ಶಿಸಿ ಎಮ್ಮೆ ಸಾವು

sagara RAIN
Published on

ಸಾಗರ: ಸಾಗರ ತಾಲೂಕಿನ ಶರಾವತಿ ಕಣಿವೆ ಒಳಗೊಂಡಂತೆ ಬಹುತೇಕ ಕಡೆ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಬುಧವಾರ ಅತಿಯಾದ ಮಳೆಯಿಂದ ಶಿರವಾಳ ಮಜರೆಯ ಗದ್ದೆಮನೆ ಗ್ರಾಮದಲ್ಲಿ ರೈತ ನವೀನ್ ಎಂಬುವವರ ಎಮ್ಮೆಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ. ಪಟ್ಟಣದಲ್ಲಿಯೂ ಭಾರಿ ಮಳೆಯಾಗುತ್ತಿದ್ದು ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ. ಚರಂಡಿ ವ್ಯವಸ್ಥೆಯನ್ನು ನಗರಸಭೆ ಸರಿಗೊಳಿಸದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೂ ಸಮಸ್ಯೆಯುಂಟಾಗಿದೆ. ಸಾಗರದ ಕೋರ್ಟ್ ರಸ್ತೆಯ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ರಸ್ತೆಯ ಮೇಲೆ ಅರ್ಧ ಅಡಿ ನೀರು ನಿಂತಿದ್ದು ಜನರು ಕಚೇರಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಬುಧವಾರದಿಂದಲೂ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರೂ ಈವರೆಗೂ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ.
ಸಾಗರ ತಾಲೂಕಿನ ಹಳೆಯ ರಭಸ ಹೆಚ್ಚಾಗಿದ್ದು ರಸ್ತೆಗಳ ಮೇಲೆ ನೀರು ನಿಂತು ವಾಹನ ಮತ್ತು ಪಾದಾಚಾರಿಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net