ಕಾಡಾನೆ ದಾಳಿಯಿಂದ ಬೆಳೆ ಹಾನಿ, ಗ್ರಾಮದೊಳಗೆ ನುಗ್ಗುವ ಭೀತಿ

29 budikote 02
Published on

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಪಚ್ಚಾರ್ಲಹಳ್ಳಿ, ಬೊಮ್ಮಗಾನಹಳ್ಳಿ, ಬೂದಿಕೋಟೆ ಹಾಗೂ ಸುತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಬೆಳಗಿನ ಜಾವ 20ಕ್ಕೂ ಹೆಚ್ಚು ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಟೊಮ್ಯಾಟೊ, ಮಾವು, ಎಲೆಕೋಸು, ರಾಗಿ ಸೇರಿ ಇತರ ಬೆಳೆಗಳನ್ನು ನಾಶ ಮಾಡಿವೆ.

ಪಚ್ಚಾರ್ಲಹಳ್ಳಿಯ ರೈತ ಮುನಿರಾಜು ಅವರ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಜಯಪ್ಪ, ನಾಗೇಶ್, ಶೇಖರ್ ಅವರ ಎಲೆಕೋಸು, ಕೋಡಗುರ್ಕಿ ಕಾಲನಿಯ ಆನಂದ್ ಅವರ ಎರಡು ಎಕರೆ ಟೊಮ್ಯಾಟೊ, ಬೂದಿಕೋಟೆ ಮತ್ತು ಪಚ್ಚಾರ್ಲಹಳ್ಳಿಯ ರೈತ ಕಲೀಂಸಾಬ್ ಮತ್ತು ಜಯಪ್ಪರ ಮಾವಿನ ತೋಪು ಸೇರಿ ಇತರ ಲಕ್ಷಾಂತರ ರೂ, ಮೌಲ್ಯದ ಬೆಳೆಗಳು ನಾಶ ಮಾಡಿವೆ. ಆನೆಗಳನ್ನು ಓಡಿಸಲು ಮತ್ತು ಪರಿಹಾರ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net