ಬೂದಿಹಾಳದಲ್ಲಿ ಗರ್ಭಿಣಿ ಆತ್ಮಹತ್ಯೆಗೆ ಶರಣು

sucide
Published on

ಸಿಂಧನೂರು: ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಗರ್ಭಿಣಿ ಬುಧವಾರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನುಪಮಾ ನಾಗರಾಜ (20) ಮೃತೆ.

ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿಯಾಗಿದ್ದ ಅನುಪಮಾ, ಬೂದಿಹಾಳದ ನಾಗರಾಜನನ್ನು ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ಜಾತಿ ವಿವಾಹ ಕಾರಣಕ್ಕಾಗಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಗಂಡನ ಮನೆಯಲ್ಲಿಯೇ ವಾಸವಿದ್ದರು. ಆದರೆ, ದಿನ ಕಳೆದಂತೆ ಗಂಡನ ಮನೆಯವರು ಅನುಪಮಾಗೆ ವರದಕ್ಷಿಣೆ ಹಾಗೂ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ.

ಗರ್ಭಿಣಿ ಎಂಬುದು ಗೊತ್ತಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸದೆ ಹಿಂಸೆ ನೀಡಿದ್ದರಿಂದ ಮಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಅನುಪಮಾ ತಂದೆ ಬಸವರಾಜ, ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಅನುಪಮಾ ಪತಿ ನಾಗರಾಜ ಹಾಗೂ ಅವರ ಕುಟುಂಬ ಸದಸ್ಯರಾದ ಚನ್ನಪ್ಪ, ಗೋಕುಲಮ್ಮ, ಆಕಾಶ, ಭಾರತಿ, ಲಕ್ಕಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net