ಬೂದಿಹಾಲ್ ವಿಎಸ್ಸೆಸ್ಸೆನ್ ಚುನಾವಣೆ ಕಾಂಗ್ರೆಸ್ ಮೇಲುಗೈ

ನೆಲಮಂಗಲತಾಲೂಕಿನ ಬೂದಿಹಾಲ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಬೆಂಬಲಿಗರು ಸನ್ಮಾನಿಸಿದರು. ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಸಂಘದ ನೂತನ ನಿರ್ದೇಶಕ ಬೂದಿಹಾಲ್‌ಮಧುಕುಮಾರ್, ಗ್ರಾಪಂ ಸದಸ್ಯ ಆನಂದ್‌ಕುಮಾರ್, ಮುನಿರಾಜು, ವಕೀಲ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್, ಮುಖಂಡ ಮಂಜುನಾಥ್ ಇದ್ದರು.

Published on

ನೆಲಮಂಗಲ: ತಾಲೂಕು ಬೂದಿಹಾಲ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 12 ನಿರ್ದೇಶಕರ ಸ್ಥಾನಕ್ಕೆ 25 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ 9 ಹಾಗೂ ಬಿಜೆಪಿ ಬೆಂಬಲಿತ 3 ಸೇರಿ ಒಟ್ಟು 12 ಮಂದಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾಸ್ಕರ್ ತಿಳಿಸಿದರು. ನೂತನ ನಿರ್ದೇಶಕರು: ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್‌ನ ಆರ್.ಗಿರೀಶ್, ಮಧುಕುಮಾರ್, ಚಂದ್ರಶೇಖರ್‌ಗೌಡ, ನಾಗರಾಜು, ಹಿಂದುಳಿದ ವರ್ಗ ಎ ಸ್ಥಾನಕ್ಕೆ ವೆಂಕಟೇಶ್, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಕೃಷ್ಣಪ್ಪ, ಪ.ಜಾತಿ ಸ್ಥಾನಕ್ಕೆ ರಾಮಯ್ಯ, ಪ.ಪಂ ಸ್ಥಾನಕ್ಕೆ ನರಸಿಂಹಮೂರ್ತಿ, ಮಹಿಳಾ ಕ್ಷೇತ್ರದಿಂದ ಭಾಗ್ಯಮ್ಮ ಆಯ್ಕೆಯಾಗಿದ್ದಾರೆ. ಎನ್‌ಡಿಎ ಮೈತ್ರಿ ಬೆಂಬಲಿತರಾಗಿ ಸಾಲಗಾರರ ಕ್ಷೇತ್ರದಿಂದ ತಿಮ್ಮರಾಯಪ್ಪ, ಮಹಿಳಾ ಸ್ಥಾನದಿಂದ ಲಕ್ಷ್ಮಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ನಳಿನಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕ ಬೂದಿಹಾಲ್ ಮಧುಕುಮಾರ್ ಮಾತನಾಡಿ ಸಂಘದ 12 ಸ್ಥಾನಗಳಲ್ಲಿ 9ರಲ್ಲಿ ಕಾಂಗ್ರೆಸ್ ಬೆಂಬಲ ಅಭ್ಯರ್ಥಿಗಳು ಗೆಲುವುಸಾಧಿಸಿದ್ದು, ಗೆಲುವಿಗೆ ಸಹಕಾರ ನೀಡಿದ್ದ ಶಾಸಕ ಎನ್.ಶ್ರೀನಿವಾಸ್, ಕಾಂಗ್ರೇಸ್ ಮುಖಂಡರು, ಸಂಘದ ಸದಸ್ಯರ ಬೆಂಬಲದೊಂದಿಗೆ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅದ್ಯಕ್ಷ ಎಂ.ಕೆ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಗ್ರಾಮಪಂಚಾಯಿತಿ ಸದಸ್ಯ ಆನಂದ್‌ಕುಮಾರ್, ಮುನಿರಾಜು, ವಕೀಲ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್, ಮುಖಂಡ ಮಂಜುನಾಥ್, ನಾರಾಯಣ್‌ಗೌಡ, ಬೂದಿಹಾಲ್‌ಕಿಟ್ಟಿ, ಮನುಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net