ಅವಳಿ ನಗರದಲ್ಲಿ 1.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

Budget presented to save Rs 1.66 lakh in twin cities
ರಬಕವಿ-ಬನಹಟ್ಟಿ ನಗರಸಭೆಯಲ್ಲಿ ನಗರಸಭೆ ಅಧ್ಯಕ್ಷೆ ವಿದ್ಯಾ ದಬಾಡಿ, ಪೌರಾಯುಕ್ತ ಜಗದೀಶ ಈಟಿ 2025-26ರ ಬಜೆಟ್ ಪ್ರತಿ ಪ್ರದರ್ಶಿಸಿದರು.
Published on

ರಬಕವಿ/ಬನಹಟ್ಟಿ: ನಗರ ಸಭೆಯಲ್ಲಿ ಗುರುವಾರ 1.66 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಅಧ್ಯಕ್ಷೆ ವಿದ್ಯಾ ದಭಾಡಿ ಮಂಡಿಸಿದರು.

ನಗರಸಭೆಯ ನಿರೀಕ್ಷಿತ ಅನುದಾನದಲ್ಲಿ ರಾಜ್ಯ ಹಣಕಾಸು ಎಸ್‌ಎ್ಸಿ ಕೇವಲ 18 ಲಕ್ಷ ರೂ.ಗಳಷ್ಟಿದ್ದು, 16ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ನಿರೀಕ್ಷಿತ ಆದಾಯ ಒಟ್ಟು 31.77 ಕೋಟಿ ರೂ. ಆಗಿದೆ.

ಒಟ್ಟು ಕಂದಾಯ ಆದಾಯ 8.56 ಕೋಟಿ ರೂ. ಹಾಗೂ ಖರ್ಚು 8.49 ಕೋಟಿ ರೂ. ಇದೆ. ಬಂಡವಾಳ ಆದಾಯ 20.18 ಕೋಟಿ ಆಗಿದ್ದರೆ, ಪಾವತಿಗಳ ಖರ್ಚು 20.18 ಕೋಟಿ ಇದೆ. ಈ ಕುರಿತು ಮಾತನಾಡಿರುವ ಪೌರಾಯುಕ್ತ ಜಗದೀಶ ಈಟಿ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಬಜೆಟ್ ರೂಪಿಸಲಾಗಿದೆ. ಸ್ವಲ್ಪ ಮಟ್ಟಿನ ಏರಿಳಿಕೆಗಳು ಸಹಜ. ಅದನ್ನು ಸರಿಪಡಿಸಲಾಗುವುದು ಎಂದರು.

ಸದಸ್ಯ ಬಸವರಾಜ ಗುಡ್ಡೋಡಗಿ ಮಾತನಾಡಿ, ನಗರಸಭೆ ಆಸ್ತಿ ಕಾಯ್ದುಕೊಳ್ಳುವಿಕೆ, ಹೊಸ ಉದ್ಯಾನವನ, ಮಹತ್ವದ್ದಾಗಿ ದಿನದಿಂದ ದಿನಕ್ಕೆ ರಸ್ತೆ ಟ್ರಾಫಿಕ್ ಸಂಬಂಧ ಮಹತ್ವದ ಕ್ರಮ, ಹೈಮಾಸ್ಟ್ ಸೇರಿದಂತೆ ಇತರೆ ಕಾಮಗಾರಿಗಳ ಬಗ್ಗೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ನ ಅನಿವಾರ್ಯತೆ ಇತ್ತು. ಇದಾವುದಕ್ಕೂ ಮಣೆ ಹಾಕದಿರುವ ಕಾರಣ ಕಳಪೆ ಬಜೆಟ್ ಆಗಿದೆ ಎಂದರು.

ಸದಸ್ಯ ಶ್ರೀಶೈಲ ಬೀಳಗಿ ಮಾತನಾಡಿ, ಉತ್ತಮ ಯೋಜನೆಗಳೊಂದಿಗೆ ಜನಪರ ಬಜೆಟ್ ಮಂಡಿಸುವಲ್ಲಿ ನಗರಸಭೆ ಯಶಸ್ವಿಯಾಗಿದೆ ಎಂದರು.

ಆಯವ್ಯಯ ನಂತರ ಸದಸ್ಯ ಯಲ್ಲಪ್ಪ ಕಟಗಿ ಆಕ್ಷೇಪಣೆ ಸಲ್ಲಿಸುವ ವಿಚಾರವಾಗಿ ತಿಳಿಸಿದಾಗ, ಅರ್ಧ ಗಂಟೆ ಸಮಯ ನಿಗದಿಪಡಿಸಲಾಯಿತಾದರೂ, ಯಾವದೇ ಚರ್ಚೆಯಾಗದೆ ಬಜೆಟ್‌ಗೆ ಸರ್ವ ಸದಸ್ಯರು ಒಪ್ಪಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net