ರೂ.೧.೩೩ ಕೋಟಿ ಉಳಿತಾಯ ಬಜೆಟ್ ಮಂಡನೆ

nagarsabe badjet
Published on

ಮಡಿಕೇರಿ: ೨೦೨೫-೨೬ನೇ ಸಾಲಿನ ಮಡಿಕೇರಿ ನಗರಸಭೆಯ ರೂ.೧,೩೩,೮೮,೨೮೨ ಮೊತ್ತದ ಉಳಿತಾಯ ಬಜೆಟ್‌ನ್ನು ನಗರಸಭಾ ಪೌರಾಯುಕ್ತರಾದ ಎಚ್.ಎಲ್.ರಮೇಶ್ ಮಂಡಿಸಿದರು.

ನಗರದ ನಗರಸಭಾ ಸಭಾಂಗಣದಲ್ಲಿ ನಗರಸಭೆಯ ೨೦೨೫-೨೬ನೇ ಸಾಲಿನ ಆಯವ್ಯಯ ಮಂಜೂರಾತಿ ಸಂಬಂಧ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿದರು.

ರೂ.೧೩,೯೮,೩೩,೨೮೨ ಆರಂಭಿಕ ಶಿಲ್ಕುವಿನ ಬಜೆಟ್‌ನಲ್ಲಿ ೨೦೨೫-೨೬ನೇ ಸಾಲಿಗೆ ರೂ.೨೯,೭೨,೪೮,೧೦೦ ಆದಾಯ ನಿರೀಕ್ಷಿಸಲಾಗಿದೆ. ರೂ.೪೨,೩೬,೯೩,೧೦೦ ಖರ್ಚು ನಿರೀಕ್ಷಿಸಲಾಗಿದ್ದು, ರೂ. ೧,೩೩,೮೮,೨೮೨ ಉಳಿತಾಯದ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಸದಸ್ಯರಾದ ಮಹೇಶ್ ಜೈನಿ, ಎಂ.ಕೆ.ಮನ್ಸೂರ್ ಆಲಿ, ಎಸ್.ಸಿ.ಸತೀಶ್, ಕೆ.ಎಸ್.ರಮೇಶ್, ಪಿ.ಚಂದ್ರಶೇಖರ್, ಎನ್.ಪಿ.ಅನಿತಾ, ಸಬೀತ, ವೈ.ಡಿ.ಶ್ವೇತಾ ಮೊಹಮ್ಮದ್ ಯಾಕೂಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net