ಯಾದಗಿರಿ : ಶಹಾಪೂರ ನಗರದ ಸಾರ್ವಜನಿಕರ ಗಮನಕ್ಕೆ 2025ರ ಜನವರಿ 10 ರಂದು ಬೆಳಿಗ್ಗೆ 12 ಗಂಟೆಗೆ ನಗರಸಭೆ ಆವರಣದಲ್ಲಿ ನಡೆಯುವ 2025-26ನೇ ಸಾಲಿನ ಆಯವ್ಯಯ (ಬಜೆಟ್) ಮೊದಲನೇ ಸುತ್ತಿನ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶಹಾಪೂರ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗೆ ಶಹಾಪೂರ ನಗರದ ಸಂಘ ಸಂಸ್ಥೆಗಳು, ನೋಂದಾಯಿತ ಎನ್.ಜಿ.ಓಗಳು ಮತ್ತು ಸಾರ್ವಜನಿಕರು ಸದರಿ ಸಭೆಯಲ್ಲಿ ಭಾಗವಹಿಸಿ ತಮ್ಮ ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.