12.99 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ

18Brg2
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಬೋರಗಾಂವ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿಂಟು ಕಾಂಬಳೆ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ 12.99 ಕೋಟಿ ರೂ. ಬಜೆಟ್ ಮಂಗಳವಾರ ಮಂಡಿಸಲಾಯಿತು.

ಬಜೆಟ್‌ನಲ್ಲಿ ರಸ್ತೆ, ಚರಂಡಿ, ನೈರ್ಮಲ್ಯ, ನೀರು ಪೂರೈಕೆ, ಬೀದಿ ದೀಪ, ಉದ್ಯಾನ, ಘನತ್ಯಾಜ್ಯ ಯೋಜನೆ ಸೇರಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ವೆಚ್ಚಗಳ ಪತ್ರಿಕೆಯಲ್ಲಿ ನೌಕರರ ವೇತನ, ಜಾಹೀರಾತು, ಮುದ್ರಣ, ಸದಸ್ಯರ ಭತ್ತೆ ,ರಸ್ತೆ, ದೀಪ ಮತ್ತು ಘನತ್ಯಾಜ್ಯ ಯೋಜನೆ, ನೀರು ಸರಬರಾಜು ಪಾರ್ಕ್ ನಿರ್ಮಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ನಿಧಿಗೆ ಒಟ್ಟು 2,91,15,970 ರೂ. ಹಾಗೂ 15ನೇ ಹಣಕಾಸು, ಎಸ್‌ಎಫ್‌ಸಿ, ವಾಟರ್ ಸ್ಕೇರ್ ಸಿಟಿಗೆ 8,75,25,194 ರೂ. ಇತರೆ ಅನುದಾನ 1,33,41,607 ವಿವಿಧ ಯೋಜನೆಗಳ ಆಯವ್ಯಯ ಮಂಡಿಸಲಾಯಿತು.

ಆದಾಯದ ಪತ್ರಿಕೆಯಲ್ಲಿ ನೌಕರರ ವೇತನ, ಎಸ್‌ಎಫ್‌ಸಿ ಮುಕ್ತ ನಿಧಿ, ವ್ಯಾಪಾರ ಮಳಿಗೆ ಬಾಡಿಗೆ, ಕಟ್ಟಡ ನಿರ್ಮಾಣ ಪರವಾನಗಿ, ವ್ಯಾಪಾರ ಪರವಾನಗಿ ಶುಲ್ಕ, ಟೆಂಡರ್ ಮಾರಾಟ ಮತ್ತು ಸಕ್ಯೆಾಪ್ ಮಾರಾಟ, ಸಂತೆ ಲೀಲಾವ, ಸಂತೆ ಕರ, ನೀರಿನ ಕರ, ನಳ ಜೋಡನೆ ಹಾಗೂ ಇತರೆ ಆಸ್ತಿ ತೆರಿಗೆ ರಾಜಸ್ವ ಆದಾಯಗಳಿಂದ 3,75,36,391 ರೂ. ಬಂಡವಾಳ ಆದಾಯದಿಂದ 15ನೇ ಹಣಕಾಸು ವಾಟರ್ ಸ್ಕೇರ್ ಸಿಟಿ ಹಾಗೂ ಇತರೆ ಅನುದಾನದಿಂದ 7,91,80,000 ರೂ., ಟ್ಯಾಕ್ಸ್ ಹಾಗೂ ವಿಶೇಷ ವಸುಲಾತಿಗಳ ಮೂಲಕ 1,33,41,607 ರೂ. ಇದ್ದು, ಒಟ್ಟು 13,00,57,998 ಆದಾಯ ಪತ್ರಿಕೆ ತೋರಿಸಲಾಗಿದೆ. ಪಪಂ ಬಾಕಿ ಉಳಿತಾಯ 75,227 ರೂ. ಇದೆ.

ಪಪಂ ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಪ್ರಥಮ ದರ್ಜೆ ಸಹಾಯಕ ರಾಹುಲ್ ಗುಡಯಿನಕರ, ದ್ವಿತೀಯ ದರ್ಜೆ ಸಹಾಯಕ ಪೋಪಟ್ ಕುರಳೆ, ಕಂದಾಯ ನಿರೀಕ್ಷಕ ಸಂದೀಪ ವೈಂಗಡೆ, ಜಿ.ಎಚ್.ಜಮಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net